Thursday, June 21, 2007

ಬೊಂಬೆಗೊಂದು ಸೀರೆ





ಜನ ಆ ರಸ್ತೆಯ ಯಾವ ಭಾಗದಿಂದ ಹಾದು ಬಂದರೂ ದೊಡ್ಡದಾದ ಬಟ್ಟೆ ಅಂಗಡಿ `ಸುಮಂಗಲಿ ಟೆಕ್ಸ್‌ಟೈಲ್ಸ್' ಒಂದು ಚಣ ಜನರ ಕಣ್ಣಿನ್ಲಲಿ ಬೀಳದೇ ಹೋಗುವುದ್ಲಿಲ. ಆ ಭಾಗಕ್ಕೆ ತುಸು ದೊಡ್ಡದಾದ ಬಟ್ಟೆ ಅಂಗಡಿಯೆಂದರೆ ಅದು ಮಾತ್ರ. ಅಂಗಡಿಯ ಕೆಲಸದ ಹುಡುಗ ಶರಣ್ ಬೆಳಿಗ್ಗೆಯೇ ಬಂದು ತನ್ನ ಕೆಲಸ ಶುರು ಮಾಡಿಬಿಡುತ್ತ್ದಿದ. ಅವನು ಬಂದೊಡನೆ ಮಾಡುತ್ತ್ದಿದ ಕೆಲಸವೆಂದರೆ ಅಂಗಡಿಯ ಒಳ-ಹೊರಗೆ ಸ್ವಚ್ಛವಾಗಿ ಗುಡಿಸಿ ನೀರು ಹಾಕುವುದು. ಅಂಗಡಿಯ ಬಾಗಿಲ ಮುಂದೆ ತೂಗುಹಾಕಿದ ಹೂವಿನ ಪೊಟ್ಟಣವನ್ನು ಒಳಗೆ ಗ್ಲಲೆಯ ಮೇಲೆ ಎತ್ತಿಟ್ಟು, ಬಣ್ಣದ ಹೊಚ್ಚ ಹೊಸ ಸೀರೆಗಳನ್ನು ಉಟ್ಟು ನಿಂತ ಬೊಂಬೆಗಳಿಗೆ ಒಂದು ಸಲ `ಹಲೋ' ಹೇಳಿ ಅವುಗಳ ಪರವಾಗಿ ತಾನೇ ಮಾತಾಡಿ ಮುಂದಿನ ಕೆಲಸಕ್ಕೆ ಅನುವಾಗುತ್ತ್ದಿದ.
ಸೀರೆ ಉಟ್ಟ ಬೊಂಬೆಗಳ ಬಟ್ಟೆ ಸರಿ ಇದೆಯೋ, ಇಲವೆ ಎಂದು ನೋಡಿ, ಯಾವುದಾದರೂ ಹೊಸ ಮಾದರಿಯ ಸೀರೆ ಬಂದ್ದಿದರೆ ಉಡಿಸಿ, ಅಂಗಡಿಯ ಆಚೆ ಇರುವ ಹೋಟೆಲಿನ್ಲಲಿ ಒಂದು ಸಿಂಗಲ್ ಚಾ ಕುಡಿಯಲು ಹೋಗುತ್ತ್ದಿದ. ಎರಡು ಗುಟುಕು ಬಿಸಿ ಚಾ ಅವನ ಹೊಟ್ಟೆಗೆ ಹೋಯಿತೆಂದರೆ ಇನ್ನೆರಡು ತಾಸಿನ ಮಟ್ಟಿಗೆ ಹುರುಪುಗೊಳ್ಳುತ್ತ್ದಿದ. ಅವನು ಚಾ ಕುಡಿದು ಬರುವಷ್ಟರ್‍ಲಲಿ ಅಂಗಡಿಯ ಮಾಲಿಕ ಪ್ರಭಾಕರ ಬಂದು ಗ್ಲಲೆಯ ಮೇಲಿರುವ ಲಕ್ಷ್ಮಿ, ಕಾತ್ಯಾಯಿನಿ, ಆರ್ಯಾದುರ್ಗಾ ಇತ್ಯಾದಿ ದೇವಿಯರಿಗೆ ಹೂ ಮುಡಿಸಿ ಸಣ್ಣ ಪೂಜೆ ಮುಗಿದಿರುತ್ತಿತ್ತು. ಅಗರಬತ್ತಿಯ ಗಂಧದಿಂದ, ಮುಖದ ಮೇಲೆ ಆಡುತ್ತ್ದಿದ ಬಿಳಿ ಸುರಳಿ ಹೊಗೆಯಿಂದ ಪಟದ ದೇವರುಗಳು ಪ್ರಸನ್ನರಾದಂತಿರುತ್ತ್ದಿದರು.
ಶರಣ್ ಪಾರುಮನೆ ಈ `ಸುಮಂಗಲಿ ಟೆಕ್ಸ್‌ಟೈಲ್ಸ್'ನ್ಲಲಿ ಹೆಂಗಳೆಯರಿಗೆ ಸೀರೆ ಮಾರಾಟ ಮಾಡುವ ಮೊದಲು ಪುಟ್‌ಪಾತ್‌ನ್ಲಲಿ ಮಕ್ಕಳ ಆಟಿಕೆಗಳನ್ನು ಮಾರುತ್ತ್ದಿದ. ಅದಕ್ಕೂ ಮೊದಲು ಸಿನಿಮಾ ಬ್ಲಾಕ್‌ಟಿಕೆಟ್‌ಗಳನ್ನು. ಇಲಿಯವರೆಗೂ ಅವನು ಏನನ್ನಾದರೂ ಮಾರಿಯೇ ಹೊಟ್ಟೆ ಹೊರೆದುಕೊಂಡವನು. ಊರ್‍ಲಲಿ ಅವನು ರಾಯ್ಕರ್ ವಕೀಲರಿಗೆ ಹೊಡೆದು, ಪೊಲೀಸ್‌ರಿಗೆ ಹೆದರಿ ಊರು ಬಿಟ್ಟೇ ಹತ್ತಕ್ಕಿಂತ ಒಂದೆರಡು ವರ್ಷ ಹೆಚ್ಚೇ ಆಗಿತ್ತು. ಇಷ್ಟು ವರ್ಷ ಜೀವನ ನಡೆಸುವುದಕ್ಕಾಗಿ ಏನ್ಲೆಲ ಕೆಲಸ ಮಾಡಿದೆ ಎಂದು ಯೋಚಿಸುತ್ತಾ ಕೂರುವಷ್ಟು ಪುರುಸೊತ್ತು ಅವನಿಗೆ ಬದುಕ್ಲಲಿ ಎಂದೂ ಸಿಕ್ಕಿರಲ್ಲಿಲ. ಅವನ ಕೆಲಸದ್ಲಲಿನ ಚುರುಕುತನ, ಮಾತು ಅಂಗಡಿಯ್ಲಲಿ ಸೀರೆ ಮಾರುವವರೆಗೆ ತಂದು ನ್ಲಿಲಿಸಿತ್ತು.
ಅಂಗಡಿಯ್ಲಲಿ ಬೆಳಗ್ಗಿನ ಹೊತ್ತು ವ್ಯಾಪಾರ ಕಡಿಮೆಯೇ. ಜನರ ಸಣ್ಣ ಪುಟ್ಟ ಬಾರೀಕು ಖರೀದಿಗಳು ಮಾತ್ರ ಇರುತ್ತ್ದಿದವು. ಹೊತ್ತು ಏರುತ್ತ ಬಂದಂತೆ ಅದರ ವೇಗ ತುಸುವೇ ಹೆಚ್ಚಾಗುತ್ತ ನಡೆಯುತ್ತಿತ್ತು. ಮದುವೆಗಳ ಸಂದರ್ಭಗಳ್ಲಲಿ ಶರಣನಿಗೆ ಒಂದು ಸಿಂಗಲ್ ಚಾ ಕುಡಿಯುವಷ್ಟೂ ಪುರುಸೊತ್ತು ಇರುತ್ತಿರಲ್ಲಿಲ. ಬಂದವರು `ಅದನ್ನು ತೋರಿಸಿ, ಇದನ್ನು ತೋರಿಸಿ' ಎನ್ನುತ್ತ ಬಟ್ಟೆಯನ್ನು ತಮ್ಮೆದುರಿಗೆ ಗುಡ್ಡ ಮಾಡಿಕೊಳ್ಳುತ್ತ್ದಿದರು. ಈ ವ್ಯಾಪಾರದ ಹೊರತಾಗಿ ಅವನು ಕೆಲಸ ಕಡಿಮೆ ಇದ ಹೊತ್ತ್ಲಲಿ ಶೋಕೇಸಿನ್ಲಲಿ ನ್ಲಿಲಿಸಿರುವ ಬೊಂಬೆಗಳಿಗೆ ಸೀರೆ ಉಡಿಸುತ್ತ್ದಿದ, ಸೆಲ್ವಾರ್ ಕಮೀಜ್‌ಗಳನ್ನು ಹಾಕುತ್ತ್ದಿದ. ಈ ಕೆಲಸದ್ಲಲಿ ಇರುವ ಅವನ ಆಸ್ಥೆಯನ್ನು ನೋಡಿದ ಮಾಲಕ ಪ್ರಭಾಕರ ``ಈ ಕೆಲಸಗಳನ್ನು ನೀನೇ ಮಾಡಿದರೆ ಸರಿ. ಮುಂದೆ ಇದು ನಿನಗೇ ಉಪಯೋಗಕ್ಕೆ ಬರುತ್ತದೆ'' ಎಂದು ಎಲರೆದರು ಜೋಕು ಮಾಡಿ, ತನ್ನ ಮಾತಿಗೆ ತಾನೇ ನಕ್ಕು ಆ ಕೆಲಸವನ್ನು ಅವನ ಕುತ್ತಿಗೆಗೆ ನೇತು ಹಾಕ್ದಿದ.
ಗೊಂಬೆಗಳಿಗೆ ಸೀರೆ ಉಡಿಸುವ ಈ ಕೆಲಸವನ್ನು ಅವನು ಕಲಿತ್ದದು ಮೊದಲು ಕೆಲಸದ್ಲಲ್ದಿದ ಪ್ರತಿಭಾಳಿಂದ. ಈಗ ಹೆಂಗಸರೇ `ಅಬ್ಬಬ್ಬಾ' ಅನ್ನುವಷ್ಟು ಚಂದವಾಗಿ ಸೀರೆ ಉಡಿಸುವನು. ಆ ಬೊಂಬೆಗಳಿಗೆ ಅವನಿಟ್ಟ ಹೆಸರುಗಳು ಬೇರೆ ಇದವು. ಶ್ರೀದೇವಿಕಾ, ರಮ್ಯ, ಮಾಧುರಿ, ಪ್ರಿಯಾಂಕಾ ಎಂಬ ಈ ಸಿನಿಮಾ ನಾಯಕಿಯರ ಹೆಸರುಗಳು ಬೊಂಬೆಗಳಿಗೆ ಕಾಯಂ ಹೆಸರುಗಳಾಗಿರಲ್ಲಿಲ. ಅವನು ನೋಡುವ ಸಿನಿಮಾದ ನಾಯಕಿಯರು ಬದಲಾದಂತೆ ಹೆಸರುಗಳೂ ಬದಲಾಗುತ್ತ್ದಿದವು. ಹೆಸರಿನಂತೆ ವಾರಕ್ಕೆ ಒಮ್ಮೆ ಬೊಂಬೆಗಳ ಸೀರೆ ಬದಲಾಗುತ್ತಿತ್ತು. ಅವುಗಳಿಗೆ ಮೊದ ಮೊದಲು ಸೀರೆ ಉಡಿಸುವಾಗ ಶರಣನ ಕೈ ನಸು ನಡಗುತ್ತಿತ್ತು. ಅವುಗಳ ಸಪಾಟು ಜಾಗಗಳು ಅವನು ಈವರೆಗೆ ಕಾಣದೇ ಉಳಿದ ಜಾಗಗಳಾಗ್ದಿದವು.
ಅವನು ಸೀರೆ ಉಡಿಸುವಾಗಲ್ಲೆಲ ಅಂಗಡಿಯ ಕೆಲಸದ ಹುಡುಗಿಯರು ನಾಚಿಕೆ ಬಿಟ್ಟು ``ಅದ್ಹೇಗೋ ಶರಣ್, ಲಂಗ, ಬ್ರಾ ಏನೂ ಇಲದೆ ಸೀರೆ ಉಡಿಸ್ತೀ?'' ಎಂದು ಇವನು ನಾಚಿಕೆಯಿಂದ ಕೆಂಪಾಗುವುದನ್ನು ನೋಡಿ ನಗುತ್ತ್ದಿದರು. ಆಗ್ಲೆಲ ಅವನು ``ನಿಮಗೆ ಅವ್ಲೆಲ ಗೊತ್ತಾಗುವುದ್ಲಿಲ ಸುಮ್ನಿರಿ'' ಎಂದು ಬೇಗ ಬೇಗ ಕೆಲಸ ಮುಗಿಸಲು ನೋಡುತ್ತ್ದಿದ. ಅಷ್ಟಕ್ಕೆ ಅವರು ಬಿಡದೆ, ``ಇದು ಒಳ್ಳೆ ಕತೆಯಾಯ್ತ್ಲಲ ಮಾರಾಯ. ನಮಗೇ ಗೊತ್ತ್ಲಿಲವೆಂದರೆ ಹೇಗೆ?'' ಎಂದು ಅವನನ್ನು ಸಿಟ್ಟಿಗೆಬ್ಬಿಸುತ್ತ್ದಿದರು.
``ಹೆಂಗಸರ ವಿಷಯ ಅವರಿಗಿಂತ ಗಂಡಸರಿಗೇ ಹೆಚ್ಚು ಗೊತ್ತಿರ್‍ತದೆ'' ಎಂದು ಬೇರೆ ಈ ಕೆಲಸ ಬಿಟ್ಟು ಬೇರೆ ಕೆಲಸ ಶುರು ಮಾಡುತ್ತ್ದಿದ.
* * *
ಅಂಗಡಿಗೆ ಎದುರಿನ ಫೋನ್ ಬೂತ್ ಕಂ ಜೆರಾಕ್ಸ್‌ನ ಮಾನಸಿ ಬಂದರಂತೂ ಶರಣನಿಗೆ ಪೀಕಲಾಟವಾಗುತ್ತಿತ್ತು. ಒಮ್ಮೆಯಂತೂ ನೇರವಾಗಿ ಇವನ್ದಿದ್ಲಲಿಗೆ ಬಂದು ಒಳ ಉಡುಪುಗಳನ್ನು ಕೇಳ್ದಿದಳು. ಮೊದಲಿಗೆ ಅವಳನ್ನು ಹುಡುಗಿಯರು ಇರುವ ಕೌಂಟರಿಗೆ ಕಳಿಸಲು ನೋಡಿದ. ಆಗ ಅವಳು ``ನೀವು ಇಲಿರುವುದು ಯಾಕೆ'' ಎಂದು ದಬಾಯಿಸಿ ಬ್ರಾ ಕೊಡಲು ಕೇಳ್ದಿದಳು. ಇವನು ``ಸೈಜು?'' ಎಂದು ಕಣ್ಣು ಬೇಡವೆಂದರೂ ಅವಳ ಎದೆಯ ಮೇಲೆ ಹೋಗಿ ``ಮೂವತ್ತಾನಾಲ್ಕು'' ಎಂದು ತೊದಲ್ದಿದ. ``ಇಲ, ಮೂವತ್ತೆರಡದನ್ನು ಕೊಡಿ'' ಎಂದು ಬೇರೆ ಯಾರಿಗೋ ಅದನ್ನು ತಕ್ಕೊಂಡು ಹೋಗ್ದಿದಳು. ಬೇರೆ ಯಾವುದೇ ಹೆಂಗಸರು ಬಂದು, ಏನೇ ಕೇಳಿದರೂ ಅವನಿಗೆ ಇಷ್ಟು ಮೈ ನಡಗುತ್ತಿರಲ್ಲಿಲ. ಅವರು ಕೇಳ್ದಿದನ್ನು ಸೈಜು, ಇತ್ಯಾದಿಗಳನ್ನು ಹೇಳುವ ಮೊದಲೇ ತೆಗೆದು ಕೊಡುತ್ತ್ದಿದ. ಇದ್ಲಲದೆ ಅವುಗಳ ಬಾಳಿಕೆ, ಉಪಯೋಗದ ಬಗ್ಗೆ ಯಾವುದೇ ಮುಲಾಜ್ಲಿಲದೆ- ಹಿಂದೆ ಮಕ್ಕಳ ಆಟಿಕೆ ಮಾರುತ್ತ್ದಿದಾಗ ಹೇಳುವಂತೆ ಹೇಳುತ್ತ್ದಿದ. ಆದರೆ ಅವಳು ಬಂದರೆ ಒಂದು ಸಣ್ಣ ನಡುಕ ಕಾಲಿನ ಹೆಬ್ಬೆರಳಿನಿಂದ ಶುರುವಾಗುತ್ತಿತ್ತು.
ಯಾವುದೇ ಫೋನ್ ಮಾಡುವುದ್ದಿದರೂ ಶರಣ ಎದುರಿನ ಅಂಗಡಿಗೇ ಹೋಗುವುದಿತ್ತು. ಹಾಗೆ ಇವನು ಹೋದಾಗಲ್ಲೆಲ ``ಓಹ್, ರಾಯರು ಇವತ್ತೆಷ್ಟು ಹೆಂಗಸರಿಗೆ ಸೀರೆ ಉಡಿಸಿದಿರಿ?'' ಎಂದು ಕೇಳುತ್ತ್ದಿದಳು. ಇವನು ``ಅಂಥ್ದದೇನ್ಲಿಲ'' ಎಂದು ಮಳ್ಳ ನಗೆಯಾಡಿ ಬಂದುಬಿಡುತ್ತ್ದಿದ. ಅವಕ್ಕ್ಲೆಲ ಉತ್ತರಗಳು ಆಮೇಲೆ ಅವನಿಗೆ ಹೊಳೆಯುತ್ತ್ದಿದವು.
ಇವ್ಲೆಲ ಬಹಳ ಹಿಂದಿನ ಮಾತಾಯ್ತು. ``ಈ ನವಿಲು ಬಣ್ಣದ ಸೀರೆ ನಿಮಗೆ ಹೊಂದುತ್ತದೆ. ನಿಮ್ಮ ಬಣ್ಣಕ್ಕೂ ಅದು ಸರಿ ಹೋಗುತ್ತದೆ'' ಎನ್ನುತ್ತಿರುವಾಗ ಮಾನಸಿ ಶರಣನನ್ನು ಹುಡುಕಿಕೊಂಡು ಅಂಗಡಿಗೇ ಬಂದಳು. `ಇವಳ್ಯಾಕೆ ಬಂದಳು' ಅಂದುಕೊಳ್ಳುತ್ತ ಅವನು ಎದಾಗ, ಅವಳೇ ತಾನು ಈಗಲೇ ಊರಿಗೆ ಹೋಗಬೇಕಾಗಿದೆ ಅಂದ್ದಿದಳು. ``ಬಸ್ಸಿಗೆ ಕೊಡುವುದಕ್ಕೂ ದುಡ್ಡ್ಲಿಲ ಮಾರಾಯ, ಬಂದ ಕೂಡಲೇ ಕೊಡ್ತೇನೆ'' ಅಂದಳು ಅವನೊಡನೆ. ನಿಸ್ಸಹಾಯಕತೆಯ್ಲಲಿ ನಿಂತ್ದಿದ ಅವಳು ಆಟವೊಂದರ್‍ಲಲಿ ಸೋತು ಬಂದ ದಣಿದ ಹುಡುಗಿಯಂತೆ ಕಂಡ್ದಿದಳು. ಶರಣ ಏನನ್ನೂ ಕೇಳಲು ಹೋಗದೆ ಅವಳಿಗೆ ದುಡ್ಡು ಕೊಟ್ಟವನೆ ``ಮತ್ತೇನಾದರೂ ಮದತ್ ಮಾಡಬೇಕ್ದಿದರೆ ಕೇಳು ಭೀಡೆ ಬೇಡ'' ಅಂದ್ದಿದ.
ಮಾನಸಿ ಊರಿಗೆ ಹೋಗಿ ಬಂದು ದುಡ್ಡನ್ನು ಮರಳಿಸಿದಾಗಲೂ ಶರಣ್ ಯಾಕೆ ಊರಿಗೆ ಹೋಗ್ದಿದೆ, ಏನು ಕತೆ ಎಂದು ಅವಳೊಡನೆ ಕೇಳಿರಲ್ಲಿಲ. ಇದಾದ ಮೇಲೆಯೇ ಅವರ ನಡುವಿನ ಭೇಟಿಗಳು ಹೆಚ್ಚುತ್ತ ನಡೆದವು.
``ಏನೋ ಕೃಷ್ಣ ಪರಮಾತ್ಮನೆ ನಿನ್ನ ಸಖಿಯರ್‍ಲೆಲ ಸೌಖ್ಯವೆ?'' ಎಂದು ಅವಳೆಂದರೆ ಇವನು ``ಹೌದು ಸಖಿ, ನನ್ನ ಹೊರತಾಗಿ ಎಲರೂ ಸೌಖ್ಯ'' ಎನ್ನುವನು. ಒಂದೊಂದು ಸಲ ಇದು ಇಷ್ಟಕ್ಕೆ ಮುಗಿಯದೆ ``ನಿನ್ನ ಹೀರೋಯಿನ್, ಏನದು ಅವಳ ಹೆಸರು ರಮ್ಯ, ಸೊಂಟ ತೋರಿಸುವುದು ಜಾಸ್ತಿ ಆಯಿತು. ನಿನ್ನ ಕನಸ್ಲಲಿ ಬಂದಾಗ ಹೇಳವಳಿಗೆ- ಕಡಿಮೆ ತೋರಿಸಲು'' ಅಂದು ನಗುತ್ತ್ದಿದಳು. ಅದಕ್ಕವನು ತಡೆಯಲಾಗದೆ ``ತೋರಿಸುವವಳು ಅವಳು, ಅದು ಅವಳಿಗೆ ಸಂಬಂಧಿಸ್ದಿದು. ನೋಡಲು ಆಗದ್ದಿದರೆ ಕಣ್ಣು ಮುಚ್ಚಿಕೊ'' ಅನ್ನುವನು. ಆ ಮಾತನ್ನು ಮರೆಸಲು ಎಂಬಂತೆ ``ಅಲವೂ ಮಾರಾಯ, ಬೇರೆಯವರ ಹೆಂಡತಿಗೆ ಸೀರೆ ಉಡಿಸುವದೇ ಆಯಿತು ನಿನ್ನದು. ನಿನ್ನ ಹೆಂಡತಿಗೆ ಉಡಿಸುವುದು ಯಾವಾಗ?'' ಎಂದು ಕೇಳ್ದಿದಳು.
ಒಮ್ಮೊಮ್ಮೆ ಅಪರಿಚಿತ ಅಂಗಡಿಗಳು, ಜನರೇ ತುಂಬಿರುವ ಬೀದಿಗಳ್ಲಲಿ, ಮನೆಗಳು ಇರುವ ಗ್ಲಲಿಗಳ್ಲಲಿ ಸುತ್ತಾಡುವಾಗ ಅವಳ ಮೈಗೆ ಮೈ ತಾಕಿದರೆ, ಕೈಗೆ ಕೈ ಸೋಕಿದರೆ ಇವನು ತನ್ನ ಗ್ಲಲಕ್ಕೆ ಕೈತಾಕಿಸಿ ತಪ್ಪಾಯಿತು ಅನ್ನುವಂತೆ ಎದೆಯ ಮೇಲೆ ಹಸ್ತವನ್ನಿಡುವನು. ಆಗ್ಲೆಲ ಅವಳು ``ಏನೋ ಮಗನೆ, ನೀವು ಗಂಡಸರದು ಇದೇ ಆಯ್ತು ನೋಡು. ಬೇಕು ಅಂತಲೇ ಮೈ ಮುಟ್ಟುವುದು ಆ ಮೇಲೆ ಏನೂ ಆಗದ್ದಿದವರ ಹಾಗೆ ತಪ್ಪಾಯ್ತು ಅನ್ನುವುದು. ನಿಮಗೆ, ಅದೆ, ಗಂಡಸರಿಗೆ ಅದೆಂಥ ಚಾಳಿಯೋ ಹೆಂಗಸರ ಮೈ ಮುಟ್ಟುವುದು? ಅದೇನು ಮಜಾ ಸಿಕ್ಕುತ್ತದೆ ಅದರ್‍ಲಲಿ? ಇದ್ಲೆಲ ನಿನಗೆ ಹೇಳ್ದಿದ್ಲಲವೊ. ಹೌದು, ನಾನ್ಯಾಕೆ ನಿನ್ನ ಮುಟ್ಟಬಾರದು?'' ಎನ್ನುತ್ತ ಅವನ ಕೈ ಹಿಡಿದು ನಡೆದ್ದಿದಳು. ಆಗ್ಲೆಲ ಶರಣ್‌ಗೆ ಒಂದು ನಮೂನೆಯಾಗಿ ಒಳಗೊಳಗೇ ಬೆವರ್‍ದಿದ. ಇದು ಇಷ್ಟಕ್ಕೆ ಮುಗಿಯದೆ ಮಧ್ಯಾಹ್ನದ ಊಟಕ್ಕೆ, ಸಂಜೆಯ ಒಂದು ಸಿಂಗಲ್ ಚಹಕ್ಕೆ ಒಬ್ಬರಿಗೊಬ್ಬರು ಕರೆಯುವವರೆಗೆ ನಡೆದಿತ್ತು.
***
``ಅಲವೊ. ನಿನ್ನ ಮಾಧುರಿಯ ಸೆರಗು ಸರಿಯಾದ ರೀತಿಯ್ಲಲೇ ಇಲ. ನೋಡಿದ ಮಂದಿ ಏನಂತಾರೆ. ಅದನ್ನು ಸರಿ ಮಾಡಿ ಬಾ. ಮಧುರೈನಿಂದ ಹೊಸ ಮಾಲು ಬಂದಿದೆ. ಅದಕ್ಕೊಂದು ರೇಟು ಮಾಡುವಾ'' ಅಂದ್ದಿದ ಮೂಲಕ ಪ್ರಭಾಕರ ಊಟ ಮಾಡಿ ಬರುತ್ತ್ದಿದ ಶರಣ್‌ಗೆ.
``ನೋಡು, ಈ ಕಾಲದ್ಲಲೂ ಪತ್ರ ಬರೆಯುವವರ್‍ದಿದಾರೆ ನಿನಗೆ. ತಕೋ ಈ ಪತ್ರ ನಿನ್ನೆಯೇ ಬಂದಿತ್ತು. ನಿನಗೆ ಕೊಡಲು ಮರೆತೇ ಹೋಗಿತ್ತು. ನೋಡು'' ಪ್ರಭಾಕರ ಇವನ ಕೈಗೆ ಪತ್ರವನ್ನು ಇಟ್ಟ.
ಸಂಜೆಯಾಗುತ್ತ್ದಿದಂತೆ ಮೊಮ್ಮಕ್ಕಳು, ಮಗ, ಸೊಸೆಯರನ್ನು ಕಾಯುತ್ತ ಕೂತಿರುತ್ತ್ದಿದ ಕೆಳಗಿನ ಮನೆ ಅಜ್ಜಿಯನ್ನು ನೋಡಿ, ಊರ್‍ಲಲಿರುವ ತಾಯಿಯ ನೆನಪಾಗಿ ಅವಳಿಗೊಂದು ಕಾರ್ಡು ಬರೆದು ಹಾಕ್ದಿದ. ಬರೆದಂತೆ ಅದನ್ನು ಮರೆತ್ದಿದ ಕೂಡ. ಈಗ ಅಕಾರಣವಾಗಿ ಮರೆತ ನಂಟಿನ ಕೊಂಡಿಯೊಂದು ಹುಡುಕಿಕೊಂಡು ಬಂದಿತ್ತು.
ಅವ್ವ ಪುರುಷೋತ್ತಮ ಮಾಸ್ತರ ಕೈಯ್ಲಲಿ ಪತ್ರ ಬರೆಸ್ದಿದಳು. ``ರಜೆ ಇದಾಗ ಊರಿಗೆ ಬಂದು ಹೋಗುವಂತೆ ಬರೆದ್ದಿದ ಮಾಸ್ತರು- ``ತಪ್ಪು ತಿಳಿದುಕೊಳ್ಳ ಬೇಡ. ನಾವ್ಲೆಲ ನೀನು ಸತ್ತೇ ಹೋಗ್ದಿದೆವೆಂದು ತಿಳಿದ್ದಿದವು. ಇಲಿ ಯಾವುದೂ ಸರಿಯಾಗ್ಲಿಲ. ಯಾವುದಕ್ಕೂ ಸಮಯಸಿಕ್ಕಾಗ ಬಂದು ಹೋಗು'' ಎಂದು ತಮ್ಮ ಎರಡು ಮಾತುಗಳನ್ನು ಬರೆದು ಪತ್ರ ಮುಗಿಸ್ದಿದರು.
``ನೋಡುವಾ, ಹೋದಾಗ ಹೋದರಾಯ್ತು'' ಅಂದು ಪತ್ರವನ್ನು ಕಿಸೆಗೆ ಮಡಚಿ ಹಾಕಿದ ಶರಣ್‌ಗೆ- `ನಮ್ಮ ಅವ್ವನಿಗೇ ಬಹಳ ವರ್ಷಗಳಿಂದ ದೂರವೇ ಉಳಿದ್ದಿದ ಮಗ ಮನೆಗೆ ಬಂದೇ ಹೋಗಲಿ, ಎಂಬ ಒತ್ತಾಯ ಇಲವ್ಲಲ' ಎಂಬುದು ಮನಸ್ಸಿಗೆ ಬಂದುಹೋಯ್ತು.
***
ಫೋಟೋ ಸ್ಟುಡಿಯೋದ್ಲಲಿ ಸಿಕ್ಕ ಸಿನಿಮಾ ಬ್ಲಾಕ್ ಟಿಕೆಟ್‌ನ ಸಹದ್ಯೋಗಿ ಹಾಗೂ ದೋಸ್ತ್ ಪರಮೇಶ ``ಏನೋ, ನಿನ್ನ ಏನೋ ಅಂದುಕೊಂಡ್ದಿದೆ. ಯಾವುದೋ ಹಕ್ಕಿಯನ್ನು ಪಟಾಯಿಸಿಕೊಂಡು ಹಾರಾಡಿಸುತ್ತ್ದಿದೀಯಂತೆ. ಬಿಡು, ಮೊದಲೇ ನೀನು ಈ ದಾರಿಗೆ ಬರಬೇಕಿತ್ತು. ಇಬ್ಬರಿಗೂ ಒಂದು ದಿಕ್ಕಾಯಿತು'' ಅಂದವನು ಮಾನಸಿಯ ಹಿಂದು ಮುಂದು ಏನೆಂದು ಕೇಳಿದ. ಅವನ ಮಾತಿಗೆ ಶರಣ್ ``ನೀನು ತಿಳಿದುಕೊಂಡಂತ್ದದು ಏನ್ಲಿಲ ಮಾರಾಯ. ಅವಕ್ಕ್ಲೆಲ ನೀನು ಬಣ್ಣಕಟ್ಟಬೇಡ'' ಅಂದ. ``ವ್ಹಾರೆವಾಹ್! ಬಡ್ಡೀ ಮಗನೆ. ನನಗೇ ಹಿಂದಿನಿಂದ ಹೆಟ್ಟುತ್ತ್ದಿದಿಯಾ? ಎಲರೂ ಮೊದ ಮೊದಲು ಹೇಳುವುದು ಹೀಗೆಯೇ. ನಾನೇ ನಿಮ್ಮಿಬ್ಬರನ್ನು ಬರ್ಮಾಬಜಾರ್‌ನ್ಲಲಿ ನೋಡ್ದಿದೇನ್ಲಲ. ಆಹಾ ಅದೆಂಥ ಘನವಾದ ನಗು ನಿಮ್ಮಿಬ್ಬರದು! ನಾನು ನೀವಿಬ್ಬರೂ ಇಲಿ ಫೋಟೋ ತೆಗೆಸಿಕೊಳ್ಳಲು ಬಂದ್ದಿದೀರೆಂದು ಅಂದುಕೊಂಡ್ದಿದೆ. ಮದುವೆಗೆ ಕರಿ ಮಾರಾಯ. ಮದುವೆಯ ಫೋಟೋ ಖರ್ಚು ನಂದೇ. ಮರೀಬೇಡ'' ಎಂದು ಒಂದು ಹಲ್ಕಟ್ ನಗು ನಕ್ಕು ಇವನ ಹೆಗಲ ಮೇಲೆ ಹಗುರವಾಗಿ ಹೋಗ್ದಿದ.
ಶರಣ್‌ಗೆ ಹೀಗೆಂದವರು ಪರಮೇಶ ಒಬ್ಬನೇ ಆಗಿರಲ್ಲಿಲ. ಅಂಗಡಿ ಮಾಲಿಕ ಪ್ರಭಾಕರ, ಇವನು ಚಾ ಕುಡಿದು ತುಸು ತಡವಾಗಿ ಬಂದ್ದುದಕ್ಕೆ ``ನಿಮ್ಮಿಬ್ಬರ ಮಾತುಕತೆ ಎಲ ಬಹಳ ಜೋರು ಇರಬೇಕು. ಹುಶಾರಾಗಿರು ಮಾರಾಯ, ಅವಳು ನಿನ್ನ ತೊಡೆ ನಡುವೆ ಹಾಕಿಕೊಂಡು ಬಿಡುತ್ತಾಳೆ. ಅದ್ಲೆಲ ಹಾಳಾಗಿ ಹೋಗಲಿ, ನಿನ್ನ ವಿಷಯ ನಂಗ್ಯಾಕೆ. ಈ ಹುಡುಗಿಯರನ್ನ ಅಂಗಡಿಯ ಬಾಗಿಲವರೆಗೆ ಮಾತ್ರ ತರಬೇಡ'' ಎಂದ್ದಿದ ಅವತ್ತಿನ ವ್ಯಾಪಾರದ ದುಡ್ಡನ್ನು ಲೆಕ್ಕ ಮಾಡುತ್ತ. ಕೆಲಸದ ಹುಡುಗಿಯರ ಮಾತಿನ ನಡುವೆಯೂ ಇದೇ ಚರ್ಚೆಯಾಗುತ್ತಿತ್ತೆಂದು ಅವನಿಗೆ ಆಗಾಗ ಕಿವಿ ಮೇಲೆ ಬ್ದಿದ ಸಂಗತಿಯಾಗಿತ್ತು. ಇದು ಈ ನಮೂನೆಯ ಹೊಸಬಣ್ಣಕ್ಕೆ ತಿರುಗುತ್ತದೆ ಎಂಬುದನ್ನು ಅವನು ಊಹಿಸಿದವನಾಗಿರಲ್ಲಿಲ. ಈ ಸಂಗತಿಯ ಬಗ್ಗೆ ಅವಳನ್ನೇ ಕೇಳಬೇಕೆಂದು ಕೊಂಡರೆ, ``ನಾವ್ಲೆಲ ಹುಡುಗಿಯರು ನೀನು ಅಂಗಡಿಯ ಶೋಕೇಸಿನ್ಲಲಿ ನ್ಲಿಲಿಸಿರುತ್ತೀಯ್ಲಲ. ಆ ಬೊಂಬೆಗಳ ಹಾಗೆ. ಅವುಗಳ ಇಸ್ತ್ರಿ ಮುಕ್ಕಾಗಬಾರದು. ಅದರಿಂದಲೇ ಅವುಗಳ ಶೋಭೆ. ಅವನ್ನು ನೋಡಿಯೇ ಖರೀದಿ ಆಗಬೇಕು. ನಾವೂ ಹಾಗೆಯೇ. ಅವುಗಳಂತೆ ಪ್ರದರ್ಶನದ ಬೊಂಬೆಗಳು'' ಅಂದ್ದಿದಳು. ಅವನು ಕೇಳ್ದಿದಕ್ಕೂ ಅವಳ ಮಾತಿಗೂ ಯಾವುದೇ ಸಂಬಂಧ ಹೊಳೆದಿರಲ್ಲಿಲ. ಈ ಅವಳ ಅಕಾರಣ ಮಾತಿನ ಬಗ್ಗೆ ಕೇಳಿದಾಗ, ``ಎಲದಕ್ಕೂ ಸಂಬಂಧ ಕೂಡಿಸಬೇಡ ನೀನು. ಅದು ತನ್ನಿಂದ ತಾನೇ ಆಗುವಂಥ್ದದು'' ಎಂದ್ದಿದಳು. ಟೆಲಿಫೋನ್ ಬೂತಿನ್ಲಲಿ ಯಾರ್‍ಯಾರಿಗೋ ನಂಬರು ಹಚ್ಚಿಕೊಡುವ, ಯಾವುದೋ ಹುಡುಗಿಯ ಮನೆಗೆ ಹುಡುಗನ ಪರವಾಗಿ ಮಾತಾಡಿ ಅವನ ಕೈಗೆ ಫೋನ್ ಕೊಡುವ, ಕಾಗದಗಳನ್ನು ಜೆರಾಕ್ಸ್ ಮಾಡಿಕೊಡುವ, ತನ್ನ ಸ್ವಂತ ಬದುಕಿನ ದಿನಗಳನ್ನು ಹಿಂದಿನ ದಿನದ ಜೆರಾಕ್ಸ್‌ನೆಂತೆಯೇ ಬದುಕುವ ಈ ಮಾನಸಿ ಎಂಬ ಹುಡುಗಿ ಯಾರು, ಕಾರವಾರದ ಮಾಜಾಳಿಯಿಂದ ಹಲವಾರು ನದಿಗಳನ್ನು, ಊರುಗಳನ್ನು ಹಾದು ಇಲಿಗೆ ಬಂದು ಮುಟ್ಟಿದ ನದಿ ತೀರದ ಊರಿನ ಹುಡುಗ ಶರಣ್ ಪಾರುಮನೆಗೂ ಏನಾಗಬೇಕು? ಎಲಿಂದಲೋ ಬಂದ ದಾರಿಗಳು ಈ ಒಂದು ಕೇಂದ್ರವೊಂದರ್‍ಲಲಿ ಕೂಡುವುದು ಅಂದರೇನು? ಅದಕ್ಕೊಂದು ಕಾರಣ, ತರ್ಕ ಒಂದೂ ಇಲವೆ? ಅಂದುಕೊಳ್ಳುವನು ಶರಣ್. ಆದರೆ ತನ್ನ ಬದುಕಿನ ಗುಟ್ಟನ್ನು ``ನಿಮಗ್ಯಾರಿಗೂ ಸಂಬಂಧಿಸ್ದಿದ್ಲಲವೊ ಅದು, ಮಕ್ಕಳ್ರಾ, ನೀವೇನು ಮಾಡಿದಿರಿ, ನೀವೇನು ಕನಸು ಕಂಡ್ದಿದೀರಿ, ಎಂದು ಯಾವತ್ತಾದರೂ ನಿಮಗೆ ಕೇಳ್ದಿದೇನೆಯೆ'' ಎನ್ನುವಂತೆ ಅವಳ್ದಿದಳು.
ಮನೆ ಎಲಿ, ಮನೆಯ್ಲಲಿ ಯಾರ್‍ಲೆಲ ಇದಾರೆ ಎಂದು ಶರಣ್ ಕೇಳಿದಾಗ ``ಅವ್ಲೆಲ ತಕ್ಕೊಂಡು ನೀನೇನು ಮಾಡ್ತಿ? ಇನ್ನೊಂದಿಷ್ಟು ಜನರಿಗೆ ಹೇಳಬಹುದು ಎಂದೆ?'' ಎಂದ್ದಿದಳು. ಆಗ ಇವಳ ಸಹವಾಸವೇ ಬೇಡವೆನ್ನಿಸಿತ್ತು ಅವನಿಗೆ. ಆದರೆ ನಮ್ಮಿಬ್ಬರ ಒಡನಾಟಕ್ಕೆ ಏನೆನ್ನಬೇಕು? ಎಂಬುದನ್ನು ಮಾತ್ರ ಕೇಳಬೇಕೆಂದುಕೊಂಡ್ದಿದ. ಆದರೆ ಅವಳನ್ನು ಕೇಳಿದರೆ ಬೇರೆ ಉತ್ತರವೇ ಬರುತ್ತದೆ. ಉತ್ತರ ಬೇಕೇ ಅಂದ್ದಿದರೆ ಅದನ್ನು ಅವಳ ಹೆಸರಿನ ಬೊಂಬೆಗೆ ಕೇಳಬೇಕಷ್ಟೆ ಅಂದು ಕೊಂಡ್ದಿದ.
ಅವತ್ತು ಅಂಗಡಿಗೆ ವಾರದ ರಜೆ. ``ನೀನು ನಾಳೆ ಅದನ್ನು ಸಂಜೆಯ ಹೊತ್ತಿಗೆ ಎಂಥ ಕೆಲಸವ್ದಿದರೂ ಸಿಕ್ಕಲೇ ಬೇಕು'' ಎಂದ್ದಿದ ಮಾನಸಿಗೆ ಇಲವೆನ್ನಲು ಆಗಿರಲ್ಲಿಲ. ಇಂಥ ರಜೆಯ ದಿನಗಳ್ಲಲಿಯೇ ಅವರ ತಿರುಗಾಟ ನಡೆಯುತ್ತ್ದಿದು. ಮತ್ತು ಅದು ಅನೇಕರ ಮಾತುಗಳ್ಲಲಿ ಪುಕ್ಕ ಒಡೆದು, ರೆಕ್ಕೆ ಬಿಚ್ಚಿ ಹಾರಾಡ್ದಿದು.
ಪ್ಲಲವಿ ಟಾಕೀಸ್ ಎದುರು ಇವನು ಬಂದ ಹತ್ತೇ ಮಿನಿಟಿನ್ಲಲಿ ಅವಳೂ ಬಂದ್ದಿದಳು. ಜನರ ನಡುವೆ ಹಾದಿ ಮಾಡಿಕೊಂಡು ಪಾರ್ಕಿನ ಹತ್ತಿರ ಹೆಜ್ಜೆ ಹಾಕುವಾಗ ಬಿಸಿಲು ಬಾಡಲು ಬಂದಿತ್ತು.
``ನೀನು ಮದುವೆಯಾಗುವಾ ಎಂದರೆ ನಮ್ಮಿಬ್ಬರ ಮದುವೆ. ಅಕ್ಕ, ತಂಗಿ, ದೋಸ್ತಿ, ಈ ತರಹದ ಸಂಬಂಧ ಎಂದರೆ ಅದ್ಲೆಲ ಬೇಡ. ನಮ್ಮ ಈ ತಿರುಗಾಟ, ಭೇಟಿ ಇದಕ್ಕ್ಲೆಲ ಯಾವ ಅರ್ಥ'' ಎಂಬುದನ್ನು ಶರಣ ಇವತ್ತಾದರೂ ಕೇಳುವುದೆಂದುಕೊಂಡ್ದಿದ. ಆದರೆ ಅದನ್ನು ಎಂದಿಗೂ ನಾನು ಅವಳನ್ನು ಕೇಳಲಾರೆ ಎಂಬುದು ಅವನಿಗೆ ಖಚಿತವಿತ್ತು.
ನಡೆಯುತ್ತ್ದಿದಂತೆ ತಟ್ಟನೆ ಶರಣಾನ ಕೈಹಿಡಿದು ತನ್ನ ಹೊಟ್ಟೆಯ ಮೇಲಿಟ್ಟುಕೊಂಡ ಮಾನಸಿ ``ಏನೆನ್ನಿಸುತ್ತದೆಯೋ ನಿಂಗೆ?'' ಅಂದಳು. ಮಾತು ಚಳಿಗೆ ನಡುಗುತ್ತ್ದಿದವರಂತಿತ್ತು. ``ಏನು, ಏನಾಯ್ತು'' ಅಂದ ಶರಣನಿಗೆ ``ಇದಕ್ಕೆ ಮೂರು ತಿಂಗಳಾಯ್ತು, ಹೊಟ್ಟೆ ಕಾಣದಿರಲಿ ಎಂದು ಚೂಡಿದಾರ ಹಾಕುತ್ತ್ದಿದೆ. ಮೊದಲೂ ಅದನ್ನೆ ಹಾಕುತ್ತ್ದಿದೆ ಅನ್ನು. ಈ ಹೊಟ್ಟೆಯೊಳಗಿನ ಪಿಂಡಕ್ಕೆ ಕಾರಣನಾದವನೊಂದಿಗೇ ನನ್ನ ಮದುವೆಯಿದೆ. ಅವನು ಯಾರು, ಹೆಸರೇನೆಂದು ಕೇಳಬೇಡ. ಮದುವೆಗೆ ನಿನ್ನ ಕರೆಯುವುದ್ಲಿಲ'' ಎಂದವಳ ಕಣ್ಣಿನ್ಲಲಿ ಬೆಳಕಿನ ಕಿರಣವೊಂದು ಕಣ್ಣಹನಿಯ ತುದಿಯ್ಲಲಿ ಮಿಂಚಿತೆ ಎಂಬುದು ಅವನಿಗೆ ಗೊತ್ತಾಗಲ್ಲಿಲ. ``ಇದಕ್ಕ್ಲೆಲ ಕಾರಣ ನೀನಂತೂ ಅಲ ಬಿಡು! ಅದಕ್ಕೂ ಧೈರ್ಯ ಬೇಕಾಗ್ತದೆ'' ಎಂದು ಅವನ ತೋಳಿಗೆ ಹೊಡೆದು ಮರುಕ್ಷಣವೇ ನಕ್ಕ್ದಿದಳು. ಈ ಮಾತನ್ನು ಇದೊಂದೇ ತನ್ನ ಬದುಕಿನ ಗುಟ್ಟು ಎನ್ನುವಂತೆ ಹೇಳಿದಳೆಂದು ಶರಣ್‌ಗೆ ಭಾಸವಾಯ್ತು. ಕ್ಲಲಿನ ಬೆಂಚಿನ ಮೇಲೆ ಕೂತುಕೊಳ್ಳುತ್ತ, ಅವನ ಕೈಹಿಡಿದು, ``ಈ ಚೂಡಿದಾರಗಳ್ಲಲಿಯೇ ಕಾಲ ಕಳೆದೆ. ನನಗೆ ಈಗಲೂ ಸೀರೆ ಉಡಲು ಬರುವುದ್ಲಿಲ. ನನಗೂ ಒಂದು ಸಾರಿ ಸೀರೆ ಉಡಿಸ್ತಿಯಾ? ನನ್ನ ನಿಮ್ಮ ಶೋಕೇಸಿನ್ಲಲಿರುವ ಬೊಂಬೆ ಎಂದು ತಿಳಿದುಕೊಂಡು?'' ಎಂದು ಕೇಳಿದ ಅವಳ ಮಾತಿನ್ಲಲಿ ಮಗುವಿನ ಯಾಚನೆಯಿತ್ತು. ಅವಳ ದೃಷ್ಟಿ ಕೂಡಿಸುವುದನ್ನು ತಪ್ಪಿಸಿ ``ಆಯ್ತು, ಆಯ್ತು'' ಅಂದ ಶರಣ್. ಅವಳೇ ಮಾತಾಡಿ ``ಇವನ್ನ್ಲೆಲ ನಾನೇ ತಲೆಗೆ ಹಚ್ಚಿಕೊಂಡ್ಲಲ. ನೀನೂ ಹಚ್ಚಿಕೊಳ್ಳಬೇಡ. ಊರಿಂದ ನಿಮ್ಮ ಅವ್ವನ ಪತ್ರ ಬಂದಿತ್ತು ಅಂದ್ದಿದೆ'' ಎಂದಳು.
``ಹೌದು ಮುಂದಿನ ವಾರ ಊರಿಗೆ ಹೋಗ್ತೇನೆ'' ಎಂದು ಅವನಿಂದ ಅಯಾಚಿತವಾಗಿ ಮಾತುಗಳು ಬಂದವು. ಅವನ ಕೈಯ್ಲಲ್ದಿದ ಅವಳ ಕೈಗಳು ತುಂಬ ತಣ್ಣಗ್ದಿದಂತೆ ಅನಿಸಿದವು.

No comments: