Saturday, June 23, 2007

ಒಂಬತ್ತು, ಎಂಟು, ಎಂಟು...


ತುಸುವೇ ತಳ್ಳಿದರೂ ಬ್ದಿದುಹೋಗುವಂತ್ದಿದ ದಣಪೆಯನ್ನು ಓರೆ ಮಾಡಿ ದೇವಿ ರಸ್ತೆಗೆ ಬಂದಾಗ ಕವಿದ ಮೋಡಗಳಿಂದಾಗಿ ಮಧ್ಯಾಹ್ನದ ಹಗಲು ಎಣ್ಣೆ ತೀರುತ್ತ ಬಂದ ದೀಪದಂತಿತ್ತು. ಅವಳು ಊರಿಗೆ ಮನೆ ಕೆಲಸಕ್ಕೆಂದು ಬಂದು ಆಗಲೇ ಆರು ತಿಂಗಳಿಗಿಂತಲೂ ಹೆಚ್ಚೇ ಇರಬೇಕು.


ಇಲಿಗೆ ಬಂದ ಮೊದಲಿಗೆ ದೇವಿ `ನಾನು ಬಂದು ಇಪ್ಪತ್ತು ದಿನ ಆಯ್ತು, ತಿಂಗಳಾಯ್ತು, ನೂಲು ಹಬ್ಬಕ್ಕೆ ಮೂರು ತಿಂಗಳು' ಎಂದ್ಲೆಲ ಲೆಕ್ಕ ಹಾಕುತ್ತ್ದಿದಳು. ಈಗೀಗ ಅದನ್ನು ನ್ಲಿಲಿಸ್ದಿದಾಳೆ. ಆ ದಿನಗಳು ನ್ಲಿಲದೆ ಮುಂದೆ ಹೋಗುತ್ತಿರುವಾಗ ಹಿಂದಿನಿಂದ ಅವುಗಳ ಲೆಕ್ಕವನ್ನು ದೇವಿ ಮಾಡದೆ ಅವುಗಳೊಂದಿಗೆ ಹೋಗುತ್ತ್ದಿದಳು.

ದೇವಿಗೆ ರಸ್ತೆಯ್ಲಲಿ ಸಾಗುವ ವಾಹನಗಳ ನಡುವೆ ಹಾದಿ ಬಿಡಿಸಿಕೊಂಡು ಹೋಗುವುದೆಂದರೆ ಜೀವ ಕುತ್ತಿಗೆಗೆ ಬರುತ್ತಿತ್ತು. ಈಗ ಈ ಊರಿನ ಎಲ ವೈವಾಟೂ ಅವಳಿಗೆ ಆಗಿದೆ. ಬೆಳಿಗ್ಗೆ ಎದು ಹಾಲನ್ನು, ತುಸು ದೂರವೇ ಇರುವ ಮೀನಿನ ಅಂಗಡಿಯಿಂದ ಮೀನನ್ನು ಅವಳೇ ತರುತ್ತ್ದಿದಳು. ಈಗವಳು ಮನೆಯ್ಲಲಿ ಉಂಡು ಚಾಪೆಯ ಮೇಲೆ ಅಡ್ಡವಾಗಿರುವ ಮಂಕಾಳಜ್ಜಿಗೆ ಗುಳಿಗೆಗಳನ್ನು ತರಬೇಕಿತ್ತು. ಏನೇನೋ ಮನಸ್ಸಿಗೆ ಹಚ್ಚಿಕೊಂಡು ಆ ಅಜ್ಜಿಗೆ ರಾತ್ರಿ ನ್ದಿದೆಯೇ ಬರುತ್ತಿರಲ್ಲಿಲ. ಆಗಾಗ ರಕ್ತದ ಒತ್ತಡ ಏರಿ ಬಡಬಡಿಸುವುದೂ ನಡೆಯುತ್ತಿತ್ತು. ದೇವಿ ಈಗ ಅಜ್ಜಿ ಮಲಗಿರುವಾಗಲೇ ಗುಳಿಗೆಗಳನ್ನು ತಂದುಬಿಡುವಾ ಎಂದು ಹೊರಟ್ದಿದಳು
ತೆಂಕಣಕೇರಿಯ ರತ್ನ ಅಕ್ಕೋರು ದೇವಿಯನ್ನು ಅವಳ ಅವ್ವ ಸಾವಿತ್ರಿಗೆ ಕಬೂಲು ಮಾಡಿಸಿ ಮನೆ ಕೆಲಸಕ್ಕೆಂದು ಕಳಿಸಿಕೊಟ್ಟ್ದಿದರು. `ನಾನೂ ಎಲೂ ಹೋಗೂದ್ಲಿಲ, ಇಲೇ ಇರ್‍ತೆ' ಎಂದ ದೇವಿಯ ಹಠವನ್ನು ಕೆಲವು ಹಸಿರು ಕೋರಾ ನೋಟುಗಳನ್ನು ಸೀರೆಯ ತುದಿಗೆ ಗಂಟು ಹಾಕಿಕೊಂಡು ರತ್ನ ಅಕ್ಕೋರಿಗೆ ಮಾತು ಕೊಟ್ಟು ಬಂದ್ದಿದ ಸಾವಿತ್ರಿ `ಬಾಯಿ ಬಿಟ್ಟರೆ ನೋಡು. ನಿನ್ನ ಮದ್ವೆ ಮಾಡುವವರು ಯಾರು? ನಮಗೇನು ನಿಮ್ಮ ಅಜ್ಜ ಮಾಡಿಟ್ಟ ಆಸ್ತಿ ಇದ್ಯೇನೆ? ಅಕ್ಕನಂಗೆ ಇಲೇ ಇದು, ಯಾರ ಸಂಗತಿಗಾದರೂ ಓಡಿ ಹೋಗ್ತಿಯೋ ನೋಡ್ತೆ. ಸುಮ್ಮನೆ ನಾನ ಹೇಳದಂಗೆ ಕೇಳು' ಎಂದವಳೇ ತಲೆ ಕೆಳಗಾಗಿ ನೇತಾಡುವ ಕೋಳಿಗಳನ್ನು ಹಿಡಿದು ಅವನ್ನು ಮಾರಲು ಆಡೂಕಟ್ಟೆ ಕಡೆ ನಡೆದಳು.

ದೇವಿಯ ಕಣ್ಣಿನ ಮುಂದೆ ಬೇರೆ ಹಾದಿಗಳೇ ಇರಲ್ಲಿಲ. ಅವಳ ಹಾಗೆಯೇ ಅರ್ಧಕ್ಕೆ ಶಾಲೆ ಬಿಟ್ಟ ಊರಿನ ಪೋರಿಯರಾದ ಮಾಲಾ, ರುಕ್ಮಿಣಿ, ಗುಲಾಬಿಯರು, ತಾವು ಮಾರುತ್ತ್ದಿದ ಹೂವು, ತೆಂಗಿನಕಾಯಿ, ಹಿತ್ತಲ ವ್ಯವಹಾರಗಳನ್ನು, ಏಕಾಏಕಿ ಇಲಿನ ಕೆಲಸಗಳನ್ನು ತಮ್ಮ ತಂಗಿಯರಿಗೆ ವಹಿಸಿ ಬಸ್ಸುಗಳನ್ನು ಹತ್ತ್ದಿದರು. ಮುಂಬಯಿ, ಹುಬ್ಬಳ್ಳಿ, ಹೈದ್ರಾಬಾದು ಎಂದ್ಲೆಲ ಮನೆ ಕೆಲಸಕ್ಕೆಂದು ಹೋದ ಅವರು, ಊರಿನ ಬಂಡಿ ಹಬ್ಬಕ್ಕೆ ಬಂದಾಗ ಬಣ್ಣದ ಬಟ್ಟೆ ಹಾಕಿಕೊಂಡು ದೇವಿಗೆ ಅರ್ಥವಾಗದ ಅಲಿನ ಭಾಷೆ ಮಾತಾಡುತ್ತ ಅವಳಿಗೆ ಗಡಿಬಿಡಿ ಆಗುವಂತೆ ಮಾಡುತ್ತ್ದಿದರು. ಅವರ ಮಾತಿನಿಂದ ದೇವಿ ಕೆಂಗೆಡುತ್ತ್ದಿದಳು. ಅವರ ವರ್ಣನೆಯ ಊರುಗಳು ದೇವಿಯನ್ನು ಕನಸಿನ ತೀರಗಳಿಗೇನೂ ಕರೆದಿರಲ್ಲಿಲ. ಚೂರುಪಾರು ದುಡ್ಡನ್ನು ಮನೆಗಳಿಗೆ ಕಳಿಸುತ್ತ್ದಿದ ಆ ಹುಡುಗಿಯರ ತೂಕ ಊರವರ ದೃಷ್ಟಿಯ್ಲಲಿ ಒಂದು ಗುಂಜಿಯಷ್ಟಾದರೂ ಹೆಚ್ಚಾಗ್ದಿದು ಖರೆ ಎಂಬುದು ಸಣ್ಣವಳಾದ ಅವಳಿಗೂ ತಿಳಿಯುತ್ತಿತ್ತು.
`ಅಕ್ಕ ಹಂಗೆ ಯಾರ ಸಂಗ್ತಿಯಾದರೂ ಓಡಿ ಹೋಗ್ತಿಯೊ ನೋಡ್ತೆ' ಎಂದ ಅವ್ವನ ಮಾತು, ಉಪ್ಪ್ದಿದರೆ, ಗಂಜಿ ಇಲದ, ಗಂಜಿಯ್ದಿದರೆ ಉಪ್ಪ್ಲಿಲದ ತಮ್ಮ ಮನೆ ಸ್ಥಿತಿ `ದಾಗಲಿ ಹೋಗಿಯೇ ಬಿಡುವ' ಎಂದುಕೊಳ್ಳುವಂತೆ, ಗಟ್ಟಿ ಮನಸ್ಸು ಮಾಡುವಂತೆ ಮಾಡಿದವು. ಆ ಹಡಬೆ ಅಕ್ಕ ನೀಲಾ ಯಾರೊಂದಿಗೊ ಓಡಿ ಹೋಗಿ, ಊರವರು `ಸಾವಿತ್ರಿಗೆ ಒಬ್ಬ ಪುಕಟ್ ಒಬ್ಬ ಅಳಿಯ ಸಿಕ್ಕ' ಎಂದು ನಗಾಡುವಂತೆ ಆಗಿತ್ತು. ಅಕ್ಕ ಹೋಗ್ದಿದು ಯಾರೊಂದಿಗೆ, ಅವನು ಎಲಿಯವನು ಎಂಬುದು ಇಲಿಯವರೆಗೆ ಪತ್ತೆ ಹತ್ತದ ಸಂಗತಿಯಾಗಿತ್ತು. ಅವಳೊಂದು ಮನೆಗೆ ಪತ್ರ ಬರೆಯಬಹುದು, ಒಂದು ತಾರು ಬಿಡಬಹುದು, ಇಲ ಗಂಡನೊಂದಿಗೆ ಮನೆಗೇ ಬರಬಹುದು ಎಂದು ದೇವಿ, ಸಾವಿತ್ರಿಯರು ಅಂದುಕೊಂಡು ಸುಳ್ಳಾಗಿತ್ತು. ಅಕ್ಕನಂತೆ ನಾನು ಆಗಬಾರದು ಅಂದುಕೊಂಡು ದೇವಿ ಪೂರ್ವ ನಿರ್ಧಾರದಂತೆ ಜೋರು ಮಳೆಯ್ಲಲಿ ರತ್ನ ಅಕ್ಕೋರ ತಂಗಿ ಇರುವ ಊರಿಗೆ ಬಸ್ಸು ಹತ್ತ್ದಿದಳು. ಆ ಸಮಯದ್ಲಲಿ ಊರ್‍ಲಲಿ ಬತ್ತ ಸಸಿಗಳನ್ನು ನೆಟ್ಟಿ ಮಾಡಲು ಜನರು ಹಣಕ್ದಿದ ಸಮಯವಾಗಿತ್ತು.





ಗುಳಿಗೆ ತಕ್ಕೊಂಡು ದೇವಿ ಮರಳುತ್ತಿರುವಾಗ ಅವಳ ಕೈಯ್ಲಲಿನ ಮೊಬೈಲು ಕಿಣಿಕಿಣಿ ಅಂದಿತು. `ಓಹ್ ಮಾಸ್ತರದು' ಅಂದುಕೊಳ್ಳುತ್ತ ದೇವಿ ಕೈಯ್ಲಲಿನ ಚೀಲವನ್ನು ಕಂಕುಳಿಗೆ ಸಿಕ್ಕಿಸಿ ಮಾತಿಗೆ ಕಿವಿಕೊಟ್ಟಳು. ಪದ್ಮಾವತಿ ಅಕ್ಕೋರ ಗಂಡನನ್ನು ದೇವಿ `ಮಾಸ್ತರೇ' ಎಂದೇ ಕರೆಯುತ್ತ್ದಿದಳು. ಅವರೇನೊ ದೇವಿಯ ಬಾಯಿಗೆ ಬಾರದ ಯಾವುದೋ ಒಂದು ಕೆಲಸ ಮಾಡುತ್ತ್ದಿದರು. ಮಧ್ಯಾಹ್ನ ಉಂಡಾದ ಮೇಲೆ ಒಂದು ಸಲ ಅವರು ಆಫೀಸಿನಿಂದ ದೇವಿಗೆ ಕರೆ ಮಾಡುತ್ತ್ದಿದರು. `ಯಾರಾದರೂ ನಮ್ಮ ಮನೆಗೆ ಬಂದ್ದಿದರೆ, ಬೇರೆ ಯಾರದಾದರೂ ಕರೆ ಬಂದಿತ್ತೆ, ಅವ್ವ ಊಟ ಮಾಡಿದಳೆ, ಗುಳಿಗೆ ತಕ್ಕೊಂಡಳೆ' ಇದಿಷ್ಟನ್ನೆ ಅವರು ವಿಚಾರಿಸುತ್ತ್ದಿದುದು. ತಪ್ಪಿಯೂ ಒಂದು ಸಲವೂ `ನಿನ್ನ ಊಟ ಆಯ್ತೆ' ಎಂದು ಕೇಳ್ದಿದು ದೇವಿಗೆ ಜ್ಞಾಪಕದ್ಲಲಿರಲ್ಲಿಲ.

ಮಾಸ್ತರದಾಗಲಿ, ಅಮ್ಮನವರದಾಗಲಿ ಕರೆ ಬಂದಾಗ ದೇವಿ ಒಮ್ಮೊಮ್ಮೆ ಹೊರಗೆ ಎಲಾದರೂ ತಿರುಗಾಡುತ್ತಿರುತ್ತ್ದಿದಳು. ಆಗ್ಲೆಲ `ಮನೆಯ್ಲಲೇ ಇದೇನೆ' ಅನ್ನುತ್ತ್ದಿದಳು. ಇಂಥ ಯಾರ ಅಂಕೆಯ್ಲಿಲದ ಸ್ವಾತಂತ್ರ್ಯಕ್ಕೆ, ಸುಳ್ಳು ಹೇಳಿದರೂ ಆ ಕಡೆಯವರು ನಂಬುವ ಈ ಸಣ್ಣ ಸಾಧನದ ಬಗ್ಗೆ ದೇವಿಗೆ ರೋಮಾಂಚನವಾಗುತ್ತಿತ್ತು. ಅದೊಂದು ಮಾತನಾಡುವ ಮಂತ್ರದಂಡ ಎಂಬುದು ಅವಳಿಗೆ ಖಾತರಿಯಾಗಿತ್ತು. ಹಾಗಾಗಿ ಧೈರ್‍ಯದಿಂದ ಅವಳು ಬಿಸಿಲು ಬಾಡುತ್ತ ಬರುವ ಹೊತ್ತಿನ್ಲಲಿ ಪಾರ್ಕು, ಬೀದಿ ಎಂದ್ಲೆಲ ಮನೆಯ ಹತ್ತಿರದ್ಲಲಿ ಒಬ್ಬಳೇ ಸುಳಿದಾಡುತ್ತ್ದಿದಳು; ಮಂಕಾಳಜ್ಜಿಯನ್ನು ಮನೆಯ್ಲಲಿ ಮಲಗಿಸಿ.

`ಬ್ಲಿಲು ಹೆಚ್ಚು ಬರುತ್ತಿದೆ' ಎಂಬ ಕಾರಣಕ್ಕಾಗಿ ಮನೆಯ್ಲಲಿನ ಫೋನನ್ನು ಪದ್ಮಾವತಿ ಅಮ್ಮನವರು ತೆಗೆಸಿಹಾಕ್ದಿದರು; ದೇವಿ ಬಂದ ಹೊಸತರ್‍ಲಲಿ. ಫೋನನ್ನು ತೆಗೆಸಿಹಾಕ್ದಿದಕ್ಕೆ ಬೇರೆಯದೇ ಕಾರಣವನ್ನು ಮಂಕಾಳಜ್ಜಿ ಕಣ್ಣೀರು ಹಾಕುತ್ತ ದೇವಿಗೆ ಹೇಳ್ದಿದಳು. ಮಗ ಅಜ್ಜಿಯ ಆಸ್ತಿಯನ್ನ್ಲೆಲ ಮಾರಿ ತಾಯಿಯನ್ನು ಇಲಿ ತಂದು ಇಟ್ಟುಕೊಂಡ್ದಿದ. ಆಸ್ತಿಗೆ ಹಕ್ಕುದಾರಳಾದ ತಂಗಿ ಸುಲೋಚನಾ ತಾಯಿಯೊಂದಿಗೆ ಮಾತನಾಡಬಹುದೆಂದು ಫೋನನ್ನೇ ತೆಗೆಸಿಹಾಕ್ದಿದರು. `ಯಾವುದಕ್ಕೂ ಇರಲಿ' ಎಂದು ವಬೈಲ್ ತಂದು, ಅದನ್ನು ಬಳಸುವುದನ್ನು ದೇವಿಗೆ ಹೇಳಿಕೊಟ್ಟ್ದಿದರು. ಅದು ಅಜ್ಜಿಯ ಮೇಲೆ ಲಕ್ಷ್ಯ ಇಡಲು ಇಟ್ಟ್ದದು ಎಂದು ದೇವಿಗೆ ಅನೇಕ ಸಾರಿ ಅನ್ನಿಸುತ್ತಿತ್ತು. ಆ ಮೊಬೈಲ್‌ಗೆ ಮನೆ ಯಜಮಾನರಿಬ್ಬರ ಹೊರತಾಗಿ ಯಾರೂ ಮಾತನಾಡುತ್ತಿರಲ್ಲಿಲ.

ಆದರೂ ಒಮ್ಮೊಮ್ಮೆ ದಾರಿ ತಪ್ಪಿದ ಕರೆಗಳು ಆ ಮೊಬೈಲ್‌ಗೆ ಬರುತ್ತ್ದಿದವು. ಆಗ ದೇವಿಗೆ ಮಜಾ. ಹಾಗೊಮ್ಮೆ ಬಂದ ಕರೆ ``ದೇವಾನಂದ ಇದಾರೆಯೆ?'' ಎಂದು ವಿಚಾರಿಸಿದಾಗ, ದೇವಿ ``ಹೌದು ಇದಾರೆ' ಎಂದ್ದಿದಳು.

``ನೀವ್ಯಾರು? ಗೊತ್ತಾಗಲ್ಲಿಲ''
``ನಾನು ಅವರ ಹೆಂಡತಿ''
``ಸ್ವಲ್ಪ ಅವರಿಗೆ ಫೋನ್ ಕೊಡ್ತೀರಾ?''
ಅದಕ್ಕೆ ದೇವಿ ``ಈಗ ಅವರಿಗೆ ಕೊಡಲಿಕ್ಕಾಗುವುದ್ಲಿಲ. ಈಗವರು ಮನೆಯ ಬಟ್ಟೆಗಳನ್ನು ತೊಳೆಯುತ್ತ್ದಿದಾರೆ'' ಅಂದು ಆ ಕರೆಯನ್ನು ಕತ್ತರಿಸ್ದಿದಳು. ಇಂಥ್ದದರ್‍ಲೆಲ ಅವಳು ಒಳ್ಳೆಯ ಆಟಗಾರ್ತಿ. ಆಗ ಮಂಕಾಳಜ್ಜಿ ``ಏ, ಹುಡುಗಿ ಹಂಗ್ಲೆಲ ಬೇರೆಯವರಿಗೆ ತ್ರಾಸು ಕುಡೂಕಾಗ. ಬಾ ಇಲೆ ಕಣ್ಣ್ಲೆಲ ಮಂಜ ಮಂಜ ಆತೀದ. ಸ್ವಲ್ಪ ನೆತ್ತಿ ಮೇಲೆ ಎಣ್ಣೆ ಹಾಕು'' ಎಂದು ಬೈದಂತೆ ಮಾಡುತ್ತ್ದಿದಳು.


* * *

ಮನೆಯವರ್‍ಲೆಲ ತಮ್ಮ ಕೆಲಸಗಳಿಗೆಂದು ಹೋದ ಮೇಲೆ ದೇವಿಯ ಮನೆ ಕೆಲಸಗಳು ತುಸು ಹೊತ್ತಿನ್ಲಲೇ ಮುಗಿದುಬಿಡುತ್ತ್ದಿದವು. ಮಂಕಾಳಜ್ಜಿಗೆ ದೇವಿಯೊಂದಿಗೆ ಮಾತು ಬೇಕು. ದೇವಿಗೆ ಒಂದೊಂದು ಸಲ ಅಜ್ಜಿಯೊಂದಿಗಿನ ಮಾತೂ ಮನೆ ಕೆಲಸದಂತೆ ಅನಿಸಿಬಿಡುತ್ತಿತ್ತು. ಅವಳೊಂದಿಗಿನ ಮಾತು ತುದಿಯನ್ನೇ ಮುಟ್ಟುತ್ತಿರಲ್ಲಿಲ. ತಾವು ಸಣ್ಣವರಿರುವಾಗಿನ ಕಾಲ ಹೇಗಿತ್ತು, ಮದುವೆಯಾದಾಗ ಹೇಗಿತ್ತು, ಮಗ ಮಗಳು ಹುಟ್ಟ್ದಿದು- ಈ ಮಂಕಾಳಜ್ಜಿಯ ಆತ್ಮಕತೆಯ ನಿರೂಪಣೆಯ ಬಗ್ಗೆ ದೇವಿಗೆ ಆಸಕ್ತಿ ಇರಲ್ಲಿಲ. ಅಜ್ಜಿಯ ಮಾತಿಗೆ `ಹಾಂ, ಹೂಂ' ಅನ್ನುತ್ತ, ಮೊಬೈಲ್ಲ್‌ಲಿ ಯಾವುದಾದರೂ ಕರೆ ಬರಬಹುದೆ ಎಂದು ನಿರೀಕ್ಷಿಸುತ್ತ, ಕಿಟಕಿಯಿಂದ ರಸ್ತೆಯ್ಲಲಿ ಹೋಗುವ ಜನರನ್ನು ನೋಡುತ್ತಿರುತ್ತ್ದಿದಳು ದೇವಿ.

ಏನ್ದಿದರೂ ಊರಿನ ವಿಷಯಗಳ ಬಗ್ಗೆ ಮಾತನಾಡಲು ದೇವಿಗಿರುವುದು ಅಜ್ಜಿಯೊಬ್ಬಳೆ. ಅವಳ ಸ್ವಮಾತುಗಳು ಮುಗಿದ ಮೇಲೆ ಹಗೂರವಾಗಿ ತಮ್ಮ ಮನೆಯ, ಊರಿನ ಬಗ್ಗೆ ಮಾತು ತೆಗೆಯುತ್ತ್ದಿದಳು. ಇದೇ ಇದೇ ಅಜ್ಜಿ ಹಿತ್ತಲಿನ್ಲಲಿರುವ ತೆಂಗಿನ ಕಾಯಿಗಳನ್ನು ಹೆಕ್ಕಿಕೊಡುತ್ತ್ದಿದುದಕ್ಕೆ ದೇವಿಗೆ ಒಂದು ತೆಂಗಿನ ಕಾಯಯನ್ನು ಕೊಟ್ಟು ಕಳಿಸುತ್ತ್ದಿದಳು. ಅದನ್ನು ದೇವಿ ಶೆಟ್ಟರ ಅಂಗಡಿಗೆ ಮಾರಿ ಭಜ್ಜಿ ತಿನ್ನುತ್ತ್ದಿದಳು. ಈಗ ಅದನ್ನು ನೆನಪು ಮಾಡಿದಾಗ `ಆಗ ನಮ್ಮ ಕೈಯ್ಲಲಿ ದುಡ್ಡೇ ಇರೂದ್ಲಿಲಾಗಿತ್ತು, ನೋಡು' ಅನ್ನುತ್ತ್ದಿದಳು.

ಅಜ್ಜಿಗೆ ದೇವಿಯ ಅಪ್ಪ ಪರಮೇಶ್ವರನ ಬಗ್ಗೆ ಬಹಳ ಅಭಿಮಾನ. ಅವನು ಊರ್‍ಲಲಿ ಹೇಗೆ ಒಬ್ಬ ಮರ್‍ಯಾದಸ್ತನಾಗ್ದಿದ, ನಾಲ್ಕು ಊರ್‍ಲಲಿ ಅವನ ಮಾತಿಗೆ ಕಿಮ್ಮತ್ತು ಹೇಗಿತ್ತು ಎಂಬುದನ್ನು ಅಜ್ಜಿ ಹೇಳುತ್ತ್ದಿದರೆ ದೇವಿ ಬಿಟ್ಟ ಬಾಯಿ ಮುಚ್ಚದೆ ಕೇಳುವಳು. ಅಪ್ಪ ಬೆಟ್ಟಕ್ಕೆ ಸೌದೆ ಕಡಿಯಲೆಂದು ಹೋದವನು ಹುಲಿ ಬಾಯಿಗೆ ಸಿಕ್ಕ್ದಿದನ್ನು ಕೇಳಿ ತಡೆಯಲಾಗದೆ ಎರಡು ಹನಿ ಅವಳ ಕಣ್ಣಿಂದ ಉದುರುವುದೂ ಇತ್ತು. ದೇವಿಯ ಕಣ್ಣ ಮುಂದೆ ಬರದ ಅಪ್ಪ ಮಂಕಾಳಜ್ಜಿಯ ಮಾತ್ಲಲಿ ಜೀವ ತಳೆಯುತ್ತ್ದಿದ.

ಅಜ್ಜಿಯ ಕೆಲಸಗಳ ಮೇಲೆ ಒಂದು ಕಣ್ಣಿಡಬೇಕೆಂದು ಯಾರೂ ಹೇಳದ್ದಿದರೂ ಮನೆಗೆ ಬಂದ ಮೇಲೆ ಯಜಮಾನತಿಯ ವಿಚಾರಣೆಗಳು ಹಾಗೇ ಇರುತ್ತ್ದಿದವು. ಆಗ್ಲೆಲ ದೇವಿ ಯಾವ ಗುಟ್ಟನ್ನು ಅಜ್ಜಿಯ ಕುರಿತಂತೆ ಬಿಟ್ಟುಕೊಡುತ್ತಿರಲ್ಲಿಲ. ಮತ್ತು ಅಜ್ಜಿ ಕೇಳಿದಳೆಂದು ಮಗಳೊಂದಿಗೆ ಮಾತನಾಡಲು ಮನೆ ಎದುರಿಗಿನ ಫೋನಿನ ಬೂತಿಗೆ ಕೈ ಹಿಡಿದು ಕರೆದುಕೊಂಡು ಹೋಗುತ್ತ್ದಿದಳು. ಅಜ್ಜಿ ಮಗಳೊಂದಿಗೆ ಮಾತಾಡುತ್ತ `ನನ್ನನ್ನು ಊರಿಗಾದರೂ ಕರೆದುಕೊಂಡು ಹೋಗಿಬಿಟ್ಟು ಬಿಡು' ಎಂಬ ಮೊರೆ ದೇವಿಯನ್ನು ಬಹಳ ದಿನ ತಡೆ ತಡೆದು ಕಾಡುತ್ತಿತ್ತು. ಆ ದಿನವೇ ದೇವಿ ಅಜ್ಜಿಯೊಂದಿಗೆ ಮಳ್ಳು ಮಳ್ಳಾಗಿ ``ಅಜ್ಜೀ ನಾವಿಬ್ಬರೂ ನಮ್ಮೂರಿಗೆ ಬಸ್ಸು ಹತ್ತಿ ಯಾರಿಗೂ ತಿಳಿಯದ ಹಾಗೆ ಹೋಗಿಬಿಡುವಾ?'' ಎಂದು ಕೇಳಿ ಅಜ್ಜಿಯನ್ನು ನಗಿಸ್ದಿದಳು.
``ದೇವಿ ನಿಮ್ಮ ಅಕ್ಕ ಹಾಗೆ ಬೇರೆ ಯಾವನದೋ ಸಂಗತಿಗೆ ಓಡಿ ಹೋಗೋದು ಬೇಡಾಗಿತ್ತು. ಮರ್‍ಯಾದೆಯಿಂದ ಮದುವೆಯಾಗಿ ಊರ್‍ಲಲೇ ಇರಬೇಕಿತ್ತು. ಅದೇ ಘನತನ ತರುವಂಥ್ದದು'' ಎಂದು ಇದಕ್ಕ್ದಿದಂತೆ ಮೊದಲ ಸಲ ದೇವಿಯ ಅಕ್ಕನ ಬಗ್ಗೆ ಮಾತನಾಡ್ದಿದಳು. ಇದೇ ಅಕ್ಕನ ಬಗ್ಗೆ ತಿಳಿಯಲು ಸರಿಯಾದ ಹೊತ್ತೆಂದು ದೇವಿ ಎಷ್ಟು ಕೇಳಿದರೂ ಅಜ್ಜಿಗೆ ಮಾತಾಡುವ ಉಮೇದು ಇರಲ್ಲಿಲ.

``ಅದ್ಲೆಲ ಆದ ಕತೆ. ಮುಂದಿನ ಕತೆ ಏನಾದರೂ ಇದರೆ ಹೇಳು''ಎಂದು ಎದು ಹೋಗ್ದಿದಳು ಅಜ್ಜಿ.
ಅಕ್ಕ ಓಡಿ ಹೋದಾಗ ಅದನ್ನು ಅರಿಯುವ ವಯಸ್ಸಾಗಿರಲ್ಲಿಲ ದೇವಿಗೆ. ಅವಳು ಬಹಳ ಚಂದವಾಗಿ ಸೀರೆ ಉಡುತ್ತ್ದಿದಳು. ಸೀರೆಯನ್ನು ಹ್ಲಲ್ಲಲಿ ಕಚ್ಚಿ ಹಿಡಿದು ಹೊಕ್ಕಳ ತುಸು ಕೆಳಗೆ ಉಡುತ್ತ್ದಿದುದು ದೇವಿಗೆ ನೆನಪಿದೆ. ಪೌಡರಿನ ವಾಸನೆಯೊಂದಿಗೆ ಅವಳು ಘಮಘಮಿಸುತ್ತ, ಅಂಗಳದ್ಲಲಿ ಬಾಳೇ ಗಿಡದ ಮೇಲೆ ನಿನ್ನೆ ಕಟ್ಟಿಟ್ಟ ಅಬ್ಬಲಿಗೆ ಮಾಲೆ ಮುಡಿದು ತನ್ನನ್ನೂ ಸಿನಿಮಾಕ್ಕೆ ಕರೆದುಕೊಂಡು ಹೋಗುತ್ತ್ದಿದಳು. ಅವಳ ಕೈಹಿಡಿದು ನಡೆಯುತ್ತ್ದಿದರೆ ಮಾಯಾ ಕಿನ್ನರಿಯೊಂದಿಗೆ ಗಾಳಿಯ್ಲಲಿ ತೇಲಿದಂತಾಗುತ್ತಿತ್ತು. ಬಹಳ ಜನರಿಗ್ಲಿಲದ ಅವಳ ಚಂದವೇ ಅವಳು ಓಡಿ ಹೋಗಲು ಕಾರಣವಾಯ್ತೆ ಎಂದು ದೇವಿ ತನ್ನ್ಲಲಿ ಅನೇಕ ಸಾರಿ ಕೇಳಿಕೊಳ್ಳುತ್ತ್ದಿದಳು. `ತಾನೇನಾದರೂ ಅವಳನ್ನು ಅರಸಿಕೊಂಡು ಇಲಿಗೆ ಬಂದನೆ' ಎಂಬ ವಿಚಾರವನ್ನು ತನ್ನ್ಲಲೆ ಆಗಾಗ ಅವಳು ಕೇಳಿಕೊಳ್ಳುವುದಿತ್ತು.


* * *

ಹಗಲು ಕಪ್ಪಾಗುತ್ತ್ದಿದಂತೆ ದೇವಿಗೆ ಬರುವ ಕರೆಗಳು `ರಾತ್ರಿ ತಡವಾಗಿ ಬರುತ್ತೇವೆ- ಊಟವನ್ನು ಟೇಬಲ್ ಮೇಲೆ ಇಟ್ಟು ಮಲಗಿ' ಎಂದು ಮಾಸ್ತರ ಅಥವಾ ಅಮ್ಮನವರದಾಗಿರುತ್ತಿತ್ತು. ತಡವಾಗಿ ಬರಲಿರುವ ಅವರನ್ನು ಕಾಯದೆ ಅಜ್ಜಿ ಮತ್ತು ದೇವಿ ಆರಾಮಾಗಿ ಟಿ.ವಿ. ನೋಡುತ್ತ ಊಟ ಮಾಡುತ್ತ್ದಿದರು. ಇಬ್ಬರಿಗೂ ಅನಂತನಾಗ್ ನಟಿಸಿದ ಸಿನಿಮಾಗಳನ್ನು ನೋಡುವುದರ್‍ಲಲಿ ಯಾವುದೇ ತಕರಾರಿರಲ್ಲಿಲ. ಅನಂತನಾಗ್ ಯಾವುದೇ ಸುಂದರಿಯನ್ನು ಪ್ರೀತಿ ಮಾಡುವುದು ದೇವಿಗೆ ಬಹಳ ಸೇರುತ್ತಿತ್ತು. ಪ್ರೀತಿ ಮಾಡಿದರೆ ಅವನ ಹಾಗೆ ಮಾಡಬೇಕು ಎಂದು ಅವಳು ಅಂದುಕೊಳ್ಳುತ್ತ್ದಿದಳು.

ಮಂಕಾಳಜ್ಜಿ ``ಅವನು ನಮ್ಮ ಕಡೆಯವನೇ ಹೊನ್ನಾವರದವನು. ಪಾರ್ಟು ಚಲೋ ಮಾಡ್ತ'' ಎಂದು ದೇವಿಗೆ ಹೇಳಿದಾಗಿನಿಂದ ಅನಂತನಾಗ್ ದೇವಿಗೆ ಇನ್ನಷ್ಟು ಹತ್ತಿರದವನಾಗ್ದಿದ. ದೇವಿ ಅಕ್ಕನೊಂದಿಗೆ ಅವನ ಸಿನಿಮಾ ನೋಡ್ದಿದ್ಲಲದೆ, ಆಗೀಗ ಪೇಟೆಯ್ಲಲಿ ತಾಗುವ ಅವನ ಬಹಳಷ್ಟೂ ಸಿನಿಮಾಗಳನ್ನು ನೋಡ್ದಿದಳು. ಅಕ್ಕನೊಂದಿಗೆ ಸಿನಿಮಾ ನೋಡುವಾಗಲ್ಲೆಲ. ಅನಂತನಾಗನದೇ ಕ್ರಾಪ್ ಬಿಟ್ಟ ಹುಡುಗನೊಬ್ಬ ಅಕ್ಕನ ಹೆಗಲ ಮೇಲೆ ಕೈಹಾಕಿ ನಗುತ್ತ ಕೂತಿರುತ್ತ್ದಿದ. ಅಕ್ಕ ``ಬೇಡ, ಬೇಡ, ಶೀ... ಶೀ...'' ಅನ್ನುವುದು ಯಾಕೆಂದು ದೇವಿಗೆ ಆಗ ಗೊತ್ತಾಗುತ್ತಿರಲ್ಲಿಲ. ಅವನದು ಅಕ್ಕನ ಹೆಗಲ ಮೇಲೆ ಕೈಹಾಕುವಂಥ ಅದೆಂಥ ದೋಸ್ತಿಯೋ, ಬೆಳಕಾಗುತ್ತ್ದಿದಂತೆ ಬೆಳ್ಳಿ ತೆರೆಯ ಮೇಲೆ ಅನಂತನಾಗ್ ನಾಯಕಿ ಲಕ್ಷ್ಮಿಯನ್ನು ಪ್ರೀತಿಸ್ದಿದೇ ಸುಳ್ಳು ಅನ್ನುವಂತೆ ಅವನು ಮಾಯವಾಗಿರುತ್ತ್ದಿದ.

ಮೊದಲಿಂದಲೂ ಅನಂತನಾಗ್ ದೇವಿಗೆ ಅಭಿಮಾನಿ ನಟ. ``ಈ ವಯಸ್ಸಿನ್ಲಲೂ ಎಷ್ಟು ಚಂದ ಕಾಣುತ್ತಾನೆ'' ಎಂದು ಅಜ್ಜಿಯ ಹತ್ತಿರ ಹೇಳುವಷ್ಟು ಅವನ ಬಗ್ಗೆ ಮೆಚ್ಚುಗೆ. ಮೊನ್ನೆ ಮೊನ್ನೆ ಬೇಕರಿಯ್ಲಲಿ ಪರಿಚಯವಾದ ಮೇಲಿನ ಮನೆ ಹುಡುಗಿ ವಾಸಂತಿಯ ಹತ್ತಿರ ಅವನ ಫೋನ್ ನಂಬರನ್ನು ಪತ್ತೆ ಮಾಡಲು ಹೇಳಬೇಕು. ಅದು ಸಿಕ್ಕಿದರೆ ಅವನೊಂದಿಗೆ ಮಾತಾಡಬಹುದು. ಇಂಥ್ದದರ್‍ಲಲಿ ವಾಸಂತಿ ಚುರುಕು. ``ಆಕಾಶದಿಂದ ಧರೆಗಿಳದ ರಂಭೆ...'' ಎಂದು ಅನಂತ್‌ನಾಗ್ ಸಿನಿಮಾದ ಹಾಡನ್ನು ಗುಣುಗುತ್ತ ಪಾತ್ರೆ ತೊಳೆಯುತ್ತ ದೇವಿ ಅವನೊಂದಿಗೆ ಮಾತಾಡುವ ಬಗ್ಗೆ ಯೋಚಿಸುತ್ತ್ದಿದಳು.

ಒಂದು ವೇಳೆ ಅನಂತನಾಗ್ ನಂಬರು ಸಿಕ್ಕಿ, ಅವನೊಂದಿಗೆ ಏನು ಮಾತಾಡಬಹುದು. ದೇವಿ ಲಹರಿಯ್ಲಲಿ ತೇಲುತ್ತಾಳೆ. ``ನಿಮ್ಮ ಅಭಿಮಾನಿ ನಾನು'' ಎಂದರೆ ನಕ್ಕುಬಿಡಬಹುದು. ``ನಾನು ನಿಮ್ಮ ಊರ ಕಡೆಯವಳು'' ಎಂದರೂ ಅವರು ನನ್ನೊಂದಿಗೆ ಮಾತಾಡುತ್ತಾರೆಯೋ, ಇಲವೊ. ಎಂಬುದು ಒಂದು ಗಳಿಗೆ ದೇವಿಗೆ ಯೋಚನೆಯಾಯ್ತು. ಅನಂತನಾಗ್ ಜೊತೆ ಮಾತಾಡುವ, ಕನಸುಕಾಣುತ್ತ ದೇವಿ ನ್ದಿದೆ ಹೋದಳು. ``ಕಾಪಾಡು ಶಿವನೆ'' ಎನ್ನುವ ಅಜ್ಜಿಯ ಕನವರಿಕೆಯಿಂದ ಬೆಚ್ಚಿ ಕಣ್ಣು ತೆರೆದ ದೇವಿ, ನೀರ್‍ಲಲಿ ಬ್ದಿದ ನಾಯಕಿಯನ್ನು ಕಾಪಾಡಿದ ನಾಯಕನ ನೆನಪಾಗಿ- ಹಾಗೇ ಕಣ್ಣುಮುಚ್ಚಿ ಮಲಗಲು ಪ್ರಯತ್ನಿಸಿದಳು.
***
``ದೇವಿ, ನೀನು ಬೇಕಾದರೆ, ಊರಿಗೆ ಫೋನ್ ಮಾಡಿ, ನಿಮ್ಮ ಅವ್ವಿಯೊಂದಿಗೆ ಮಾತಾಡು'' ಎಂದು ಪದ್ಮಾವತಿ ಅಮ್ಮನವರು ಹೇಳ್ದಿದೇ ನೆಪವಾಗಿ, ತಮ್ಮ ಮನೆ ಹತ್ತಿರದ್ಲಲಿರುವ ರಾಯ್ಕರ ಮಾಸ್ತರರ ಮನೆಗೆ ಫೋನ್ ಮಾಡ್ದಿದಳು. ಇವಳ ಫೋನ್ ಕರೆಗೆ ಗಾಬರಿಯಿಂದ ಕರೆಗೆ ಓಡಿ ಬಂದ ಅವ್ವ ಸಾವಿತ್ರಿಗೆ ``ನಂದೇ ಫೋನ್‌ನ್ಲಲಿ ಮಾತಾಡ್ತೆ'' ಎಂದು ಧಿಮಾಕಿನ್ಲಲಿ ಹೇಳಿದಳು. ದೇವಿಗೆ ಅವಳವ್ವ ``ನೀನು ಇಂಥ್ದದಕ್ಕ್ಲೆಲ ದುಡ್ಡು ಖರ್ಚು ಮಾಡಬೇಡ. ಮುಂದೆ ಬೇಕಾಗುತ್ತದೆ'' ಎಂದು ಆ ಕಡೆಯ ಸಂಪರ್ಕ ಕಡಿದ್ದಿದಳು. ಆಗ ದೇವಿಯ ಮನಸ್ಸಿಗೆ ಬೇಜಾರು ಅನ್ನಿಸಿಬಿಟ್ಟಿತು. ``ಈ ಹಡಬೆ ರಂಡೆಯೊಂದಿಗೆ ಮಾತೇ ಆಡಬಾರದು'' ಎಂದು ತನಗೆ ತಾನೇ ನಿಕ್ಕಿ ಮಾಡಿಕೊಂಡಳು. ಮರುಕ್ಷಣ ಅವ್ವನ ಬಗ್ಗೆ ಪಾಪ ಅನ್ನಿಸಿತು. ಊರ್‍ಲೆಲ ಅಲೆದು ಕೋಳಿಗಳನ್ನ ತಕ್ಕೊಂಡು ಅವನ್ನು ಪೇಟೆಯ್ಲಲಿ ಮಾರುತ್ತಾಳೆ. ಹಗಲಿನ ಉರಿಬಿಸಿಲು ನೆತ್ತಿಯನ್ನು ಸೀಳುತ್ತ್ದಿದರೂ, ಕೋಳಿಗಳನ್ನು ದರ ಬಿಡದೆ ಮಾರಿಯೇ ನಾಲ್ಕು ಕಾಸು ಮಾಡಿಕೊಂಡು, ಪಳದಿಗೆಂದು ಮೀನು ಹಿಡಿದೇ ಮನೆಗೆ ಬರುತ್ತಾಳೆ. ಅವಳು ಹೇಳುವುದರ್‍ಲಲಿ ತಪ್ಪ್ಲಿಲ. ಆದರೆ ಇದು ನಾನು ದುಡ್ಡುಕೊಟ್ಟು ತಕ್ಕೊಂಡ್ದದ್ಲಲ ಎಂದು ಅವ್ವನಿಗೆ ಹೇಳಿದರೂ ಅವಳು ಕೇಳುತ್ತಾಳೆ ಎಂಬುದರ್‍ಲಲಿ ದೇವಿಗೆ ನಂಬಿಕೆ ಇರಲ್ಲಿಲ.

ಮೊದಲ್ಲೆಲ ಯಾರ್‍ಲೆಲ ಫೋನ್ ಕರೆಗಳು ಬಂದವು. ಯಾರಿಗೆ ಫೋನ್ ಮಾಡ್ದಿದಾರೆ ಎಂಬ ಮೊಬೈಲ್ ತಪಾಸಣೆ ಈಗೀಗ ಪದ್ಮಾವತಿ ಅಮ್ಮನಿಂದ ಕಮ್ಮಿಯಾಗಿತ್ತು. ಹಾಗಾಗಿ ದೇವಿ ರತ್ನ ಅಕ್ಕೋರಿಗೆ ಆಗೀಗ ಫೋನ್ ಮಾಡಿ ತನ್ನ ಅವ್ವಿಯ ಬಗ್ಗೆ ವಿಚಾರಿಸುತ್ತ್ದಿದಳು. ``ಕೋಳಿ ವ್ಯಾಪಾರಕ್ಕೆ ಹೆಚ್ಚು ಹೋಗದಿರುವಂತೆ, ಅವಳಿಗೆ ದುಡ್ಡೇನಾದರೂ ಬೇಕಾದರೆ ಕೊಡುವಂತೆ'' ರತ್ನ ಅಕ್ಕೋರನ್ನು ದೇವಿ ಕೇಳಿಕೊಳ್ಳುತ್ತ್ದಿದಳು.

ಒಮ್ಮೊಮ್ಮೆ ಅವಳ ಮೊಬೈಲ್‌ಗೆ ಯಾವ ಕರೆಗಳು ಇಡೀ ದಿನ ಕಾದರೂ ಬರುತ್ತಿರಲ್ಲಿಲ. ತನ್ನೊಂದಿಗೆ ಮಾತನಾಡುವುದಕ್ಕೆಂದೇ ಹುಡುಗನದೊ, ಗಂಡಸಿನದೊ ಕರೆ- ಅದೂ ಬರುತ್ತಿರಲ್ಲಿಲ. ಅದು ಕೂಡ ಹಾದಿ ತಪ್ಪಿ ಬಂದ ನಿಧಾನವಾಗಿ ಪರಿಚಯ ಬೆಳೆದ ಕರೆ. ಎಷ್ಟು ಒತ್ತಾಯ ಮಾಡಿದರೂ ತನ್ನ ಹೆಸರು, ವಿಳಾಸವನ್ನು ಹೇಳದೆ- ಸಣ್ಣದನಿಯ್ಲಲಿ ಕೊಮಣೆ ಮಾಡುತ್ತ್ದಿದಳು ದೇವಿ. ಇಂಥ ಮಾತುಕತೆಗಳು, ಪರಿಚಯ, ಗುರುತು, ಹೆಸರು, ವಿಳಾಸವ್ಲಿಲದೆ ನಡೆಯುತ್ತವ್ಲಲ ಎಂದು ಅವಳಿಗೆ ಸೋಜಿಗ.
***
ರಸ್ತೆಯ್ಲಲಿ ಹಾಯುವ ಇಡೀ ಬಸ್ಸುಗಳನ್ನೇ ಪ್ರತಿಫಲಿಸುವ, ಮೈಪೂರ್ತಿ ಕನ್ನಡಿಗಳಿರುವ ಇಮಾರುತುಗಳ ನೆರಳನ್ನು ದಾಟಿ ಅವ್ವನಿಗೆ ಸೀರೆ ತಕ್ಕೊಳ್ಳಲೆಂದು ಹೋಗಿ ಬಂದ ದಿನದಿಂದ ದೇವಿಗೆ ತಳಮಳ ಶುರುವಾಗಿತ್ತು. ಅದ್ಲೆಲೊ ಸೀರೆ ಅಂಗಡಿಯ ಮುಂದೆ ಸಿಕ್ಕ ದೇವಿಯ ಊರಿನ ಗೌರಿ ಅವಳಾಗಿಯೇ ಗುರುತು ಹಿಡಿದು ಮಾತಾಡಿಸಿ ``ಏ, ನೀನೂ ಇಲೇ ಇದ್ಯೇನೆ?'' ಯಾರ ಮನೆಯ್ಲಲಿ ಕೆಲಸ ಮಾಡ್ತಿಯೆ?'' ನಾನು ಶಾಂತ ಅಕ್ಕೋರ ಮಗಳ ಮನೇಲಿ ಕೆಲಸ ಮಾಡ್ತೆ'' ಎಂದು ಗಡಿಬಿಡಿಯ್ಲಲೇ ಅವಳ ಬಗ್ಗೆ ಹೇಳಿ, ಇವಳು ಯಾರ ಮನೆಯ್ಲಲಿ ಕೆಲಸ ಮಾಡುತ್ತಾಳೆಂಬುದನ್ನು ಕೇಳಿ ತಿಳಿದುಕೊಂಡ್ದಿದಳು. ಸೀರೆ ತಕ್ಕೊಳಲು ಅವಳೇ ದೇವಿಗೆ ಸಹಾಯ ಮಾಡಿ, ಮಾತಿನ ನಡುವೆ ದೇವಿಯ ಅಕ್ಕ ನೀಲಾ ಇದೇ ಊರಿನ್ಲಲಿ ಇರುವಳೆಂದೂ, ಗೌರಿ ಸಿನಿಮಾ ನೋಡಲು ಹೋದಾಗ ಅವಳೇ ಸಿಕ್ಕು ಮಾಡನಾಡಿಸಿದಳಂತೆ. `ಫೋನ್ ಮಾಡು' ಎಂದು ನಂಬರನ್ನೂ ಕೊಟ್ಟಳಂತೆ. `ಅವಳು ಎಲ್ದಿದಾಳೆ, ನೀನು ಅವಳನ್ನು ಮತ್ತೆ ಮಾತಾಡಿಸಿದ್ಯೇನೆ, ಅವಳೊಂದಿಗೆ ಯಾರ್‍ದಿದರು' ಎಂಬ್ಲೆಲ ದೇವಿಯ ಪ್ರಶ್ನೆಗೆ ಗೌರಿ `ಗೊತ್ತ್ಲಿಲ' ಎಂದ್ದಿದಳು.
``ನಿನಗೆ ಆ ನಂಬರು ಕೊಡ್ತೆ. ಮನೆಯ್ಲಲಿ ಎಲೋ ಇಟ್ಟ್ದಿದೆ. ಸಿಕ್ಕ ಕೂಡಲೇ ನಿಂಗೆ ಹೇಳ್ತೆ'' ಎಂದು ಗೌರಿ ದೇವಿಯ ಬಾಡಿದ ಮುಖವನ್ನು ನೋಡಿ ಅವಳ ಕೈ ಹಿಡಿದು ``ಮ್ದುದಾಂ ಹುಡುಕಿ ಹೇಳ್ತೆ'' ಎಂದು ಎರಡೆರಡು ಸಲ ಹೇಳಿ ಇವಳನ್ನು ಬಸ್ಸು ಹತ್ತಿಸ್ದಿದಳು.

ಮನೆಯ್ಲಲಿ ದೇವಿಯ ಮುಖ ಸಣ್ಣದಾಗಿರುವುದನ್ನ ನೋಡಿದ ಮಂಕಾಳಜ್ಜಿ. ``ಏನೇ, ಎಂಥ್ದದಕ್ಕೆ ಬೇಜಾರೆ? ಹಂಗ್ಲೆಲ ಮನಸ್ಸಿಗೆ ಬೇಜಾರು ಮಾಡಕಣುಕಾಗ'' ಎಂದಳು.

``ಅಕ್ಕ ಇದೇ ಊರ್‍ಲಲಿ ಇದಾಳೆ ಅಜ್ಜಿ''. ಮ್ಲೆಲಗೆ ಎಂದ ದೇವಿಗೆ ``ಜೀವನ ಎಲಿಂದ, ಎಲಿಗೋ ಕೂಡಸ್ತಿದ ನೋಡ್. ಪೂರಾ ಹರಿದು ಹೋಯ್ತಂದೆ ಬಿಟ್ಟ್ದದೂ, ಅದೃಷ್ಟ ಇದ್ರೆ ಮತ್ತೆ ಕೂಡಬಹುದು. ನಿಮ್ಮ ಅಕ್ಕನದೂ ನಿಂದೂ ಆದ ಹಂಗೆ. ವಿಚಾರ ಮಾಡಬೇಡ. ನಿಂಗೆ ಅಕ್ಕಸಿಕ್ಕುವ ಅದೃಷ್ಟ ಇದ್ರೆ ಸಿಕ್ಕೇ ಸಿಕ್ಕುತ್ತಾಳೆ... ಇಬ್ಬರಿಗೂ ನಸೀಬು ಬೇಕು. ಏನು ಹೇಳು ನಸೀಬು ಅನ್ನುವುದು ಒಂದು ಜೀವನಕ್ಕೆ ಬೇಕು'' ಅಂದು ಸಮಾಧಾನದ ನಾಲ್ಕು ಮಾತಾಡ್ದಿದಳು.
***
ವೆಂಕಟ್ರಮಣ ದೇವರ ಬಂಡೀಹಬ್ಬ ದಿನ ನಿನ್ನ ಹಣೆಯ ನಡುವೆ ಹಾಕಿಸಿದ ಹಸಿರು ಹಚ್ಚೆ ಹಾಗೆಯೇ ಇದೆಯೇ... ಅಳಿಸಲಾಗದ ಚುಕ್ಕಿಯೊಂದನ್ನು ನಿನ್ನ ಹಣೆಗೆ ಇಟ್ಟಂತೆ...

ಕಿವಿಗೆ ಅವ್ವ ನಿನಗೆ ಮಾಡಿಸಿಕೊಟ್ಟ ದೊಡ್ಡ ರಿಂಗು, ಕೈಯ ಬಳೆ ಹಾಗೆಯೇ ಇದೆಯೆ... ಏನ್ಲೆಲ ಕೇಳಬೇಕಿದೆ ನಿನಗೆ. ನೀನು ಬೆಳೆಸಿದ ದಾಸಾಳ, ರಂಜಕದ ಹೂವಿನಗಿಡಗಳು ಮನೆಯ ಹಿತ್ತಲ್ಲಲಿ ಬೆಳೆದು ನಿಂತಿವೆ. ಗೋಡೆಯ್ಲಲಿ ನೀನು ಬರೆದ ನವಿಲು, ಗಿಳಿ, ಗುಬ್ಬಿಗಳ ಕೆಂಪು ಹಸೆ ಕಳೆದ ವರ್ಷ ಮನೆಗೆ ಗಿಲಾಯಿ ಮಾಡುವಾಗ ಅಳಸಿ ಹೋದವು... ನಾವಿಬ್ಬರೂ ಜೋರು ಮಳೆಯ್ಲಲಿ ಸೂಡಿಕೊಂಡ ಕೊಡೆಯನ್ನು ಜೋರು ಗಾಳಿಗೆ ಹಾರಿಹೋಗದಂತೆ ಸಂಭಾಳಿಸಿ ಹಿಡಿದುಕೊಳ್ಳುತ್ತ ದೇವಳದ ಗ್ದದೆಗೆ ಅವ್ವನಿಗೆಂದು ಗಂಜಿ ತಕ್ಕೊಂಡು ಹೋದ್ದದು ಈಗಲೂ ನಿನಗೆ ನೆನಪಿದೆಯೆ...

ನೀನೀಗ ಏನು ಮಾಡುತ್ತೀ? ಇಷ್ಟು ವರ್ಷ ನಮ್ಮ ನೆನಪು ಬರಲ್ಲಿಲವೆ? ನೀನು ಓಡಿ ಹೋಗುವ ಮೊದಲ ದಿನ ಅನಂತನಾಗನ ಸಿನಿಮಾ ನೋಡಿ ಬಂದೆವ್ಲಲ, ಆ ರಾತ್ರಿ ಅವ್ವ ನಿನಗೇಕೆ ಬಯ್ದಳು? ಕೇಳಬೇಕೆಂದು ಕೊಂಡರೆ ನೀನೇ ಇರಲ್ಲಿಲ...
``ನಾನು, ನಿನ್ನ ತಂಗಿ ದೇವಿ, ಊರು ಇಂಥ್ದದು, ಅವ್ವನ ಹೆಸರು ಸಾವಿತ್ರಿ.... ಅಪ್ಪ ಪರಮೇಶ್ವರ -ಅವರಿಬ್ಬರೂ ನನ್ನಂತೆಯೇ ನಿನಗೂ ತಂದೆ ತಾಯಿಯರು'' ಎಂದು ಅಕ್ಕನಿಗೆ ಹೇಳಬೇಕೆಂದುಕೊಳ್ಳುವುದನ್ನು ತನಗೆ ತಾನು ಹೇಳಿಕೊಳ್ಳುತ್ತ ದೇವಿ, ಗೌರಿ ಕೊಟ್ಟ ಅಕ್ಕನ ಸಂಖ್ಯೆಗಳಿಗೆ ಪ್ರಯತ್ನಿಸುತ್ತ್ದಿದಳು. ಹಾಗೆ ಪ್ರಯತ್ನಿಸಿದಾಗಲ್ಲೆಲ ``ನೀವು ಡಯಲ್ ಮಾಡಿದ ಸಂಖ್ಯೆ ಸರಿ ಇದೆಯೇ ಎಂದು ಪರೀಕ್ಷಿಸಿ'' ಎಂದು ಮತ್ತೆ ಮತ್ತೆ ಬರುತ್ತಿತ್ತು.

ದೇವಿ ಪ್ರಯತ್ನ ಬಿಡದೆ ``ಒಂಬತ್ತು, ಎಂಟು, ಎಂಟು....'' ಎಂದು ಪ್ರಯತ್ನಿಸುತ್ತಲೇ ಇದಳು- ಅಗೋಚರ zs ನಿಯೊಂದನ್ನು ಹಿಡಿಯುವ ತವಕದ್ಲಲಿ. ಸಂಜೆಯ ಮಬ್ಬುಗತ್ತಲ್ಲಲಿ ದೇವಿಯ ಕಣ್ಣುಗಳ್ಲಲಿ ಸಂಖ್ಯೆಗಳಷ್ಟೆ ಶಾಶ್ವತ ಬಿಂಬಗಳಾಗಿ ಹೊಳೆಯುತ್ತ್ದಿದವು.

1 comment:

swapnageleya said...

good story....

www.ravindratalkies.blogspot.in